ಬಸ್‌ಲ್ಲೇ ಕಂಡಕ್ಟರ್‌ಗೆ ಹಾರ್ಟ್ ಅಟ್ಯಾಕ್: “ಚಕ್ಕರ್” ಆಯಟ್ಟಿ, ಮಂಗಳಾ ಮಾಡಿದ ತಪ್ಪೇನು ಗೊತ್ತಾ…!?

ಹುಬ್ಬಳ್ಳಿ: ಕರ್ತವ್ಯ ನಿರತ ಕಂಡಕ್ಟರ್ ಹೃದಯಾಘಾತ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ತನಿಖಾಧಿಕಾರಿಗಳಿಬ್ಬರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆಂಬ ಗಂಭೀರ ಆರೋಪವನ್ನ ಮಾಡಲಾಗಿದೆ.
ಈ ಬಗ್ಗೆ ಸಮಗ್ರವಾಗಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಡಾ.ಕೆ.ಎಸ್.ಶರ್ಮಾ ಪತ್ರ ಬರೆದಿದ್ದು, ಅದೀಗ ಕರ್ನಾಟಕವಾಯ್ಸ್.ಕಾಂ ಲಭಿಸಿದೆ.

ಮೃತ ನಿರ್ವಾಹಕ ಮಹೇಶ ಹೂಗಾರಗೆ ಅನ್ಯಾಯವಾಗಿದ್ದು, ಇದಕ್ಕೆ ತನಿಖಾಧಿಕಾರಿಗಳಾದ ಎ.ಎಚ್.ಆಯಟ್ಟಿ ಹಾಗೂ ಮಂಗಳಾ ಅವರು ಕಾರಣವಾಗಿದ್ದು, ಕಾನೂನು ಬಾಹಿರವಾದ ಸ್ಥಳದಲ್ಲಿ ತಪಾಸಣೆ ಮಾಡಿದ್ದಾರೆಂದು ಡಾ.ಶರ್ಮಾ ಹೇಳಿದ್ದು, ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.