“ದರಗಾದ” ಕಂಪ್ಲೇಂಟ್- ಬಚ್ಚಾಖಾನ ಪೊಲೀಸ್ ಕಸ್ಟಡಿಯಲ್ಲಿ..!
1 min readಧಾರವಾಡ: ಬೆಂಗಳೂರಿನ ಬಿಲ್ಡರ್ ಸುಬ್ಬರಾಜು ಹತ್ಯೆ ಕೇಸಿನಲ್ಲಿ ಶಾರ್ಪ್ ಶೂಟರ್ ಆಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದ ಮೊಹ್ಮದಯೂಸುಫ ಬಚ್ಚಾಖಾನ, ಇತ್ತೀಚೆಗೆ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಲ್ಲಿಯೂ ತನ್ನ ಕೈವಾಡವಿರುವುದನ್ನ ಒಪ್ಪಿಕೊಂಡಿದ್ದ. ಅದಾದ ನಂತರ ನಡೆಯುತ್ತಿರುವ ಧಮಕಿ ಪ್ರಕರಣದ ಸಂಬಂಧಿಸಿದಂತೆ, ಧಾರವಾಡ ಉಪನಗರ ಠಾಣೆ ಪೊಲೀಸರು ಮೈಸೂರಿನಿಂದ ಕರೆತಂದು ನಾಲ್ಕು ದಿನ ಪಡೆದಿದ್ದಾರೆ.
ಪೆಟ್ರೋಲ್ ಬಂಕ್ ನಡೆಸುತ್ತಿರುವ ಹುಸೇನಿ ದರಗಾದ ಮೇಲೆ ಕೆಲವರು ಧಮಕಿ ಹಾಕಿ, ಬಚ್ಚಾಖಾನ ಜೊತೆ ಮೊಬೈಲನಲ್ಲಿ ಮಾತಾಡುವಂತೆ ಒತ್ತಾಯ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಿಮನಸಾಬ ದರಗಾದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಈ ಕಾರಣಕ್ಕೆ ಉಪನಗರ ಠಾಣೆ ಪೊಲೀಸರು ಮೈಸೂರು ಜೈಲಿನಲ್ಲಿದ್ದ ಮೊಹ್ಮದಯೂಸುಫ ಬಚ್ಚಾಖಾನನನ್ನ ಕರೆತಂದು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಾಲ್ಕು ದಿನದ ಮಟ್ಟಿಗೆ ಕಸ್ಟಡಿ ಪಡೆದಿದ್ದಾರೆ. ಪ್ರೂಟ್ ಇರ್ಫಾನ ಹತ್ಯೆಯಾದ ನಂತರ ಬಚ್ಚಾಖಾನ ಹಲವರಿಗೆ ಕಾಲ್ ಮಾಡಿ ಧಮಕಿ ಹಾಕಿದ್ದಾನೆಂಬ ದೂರುಗಳು ಕೂಡಾ ಇವೆ ಎಂದು ಹೇಳಲಾಗಿದೆ.
ಈ ಹಿಂದೆ ಪ್ರೂಟ್ ಇರ್ಫಾನ ಹತ್ಯೆ ಪ್ರಕರಣದಲ್ಲಿ ಮೂರು ದಿನದವರೆಗೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಕಸ್ಟಡಿ ಪಡೆದು, ಹತ್ಯೆಯ ಹಿಂದಿನ ಅಸಲಿಯತ್ತನ್ನ ಪಡೆದುಕೊಂಡಿದ್ದರು.