ಸಿಡಿ ಲೇಡಿ ತಾಯಿಯ ವಿರುದ್ಧ “ಸಮಾಜ ನಿಂದನೆ” ದೂರು…!
1 min readಅಥಣಿ: ಸಿಡಿ ಲೇಡಿಯು ತಾಯಿಯೊಂದಿಗೆ ಮಾತನಾಡಿದ ಆಡೀಯೋವನ್ನ ಕೇಳಿ ತಮಗೆ ಬೇಸರವಾಗಿದೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವರು ದೂರು ನೀಡಿದ್ದಾರೆ.
ಅರುಣ ಮಾರುತಿ ಮೇಲ್ಗಡೆ ಎಂಬುವವರೇ ದೂರನ್ನ ನೀಡಿದ್ದು, ವೈರಲ್ ಆಗಿರುವ ಆಡೀಯೋದಲ್ಲಿನ ಶಬ್ಧಗಳನ್ನ ಬಗ್ಗೆ ದೂರಿನಲ್ಲಿ ನಮೂದು ಮಾಡಿದ್ದಾರೆ. ಇದರಿಂದ ಸಮಾಜವನ್ನ ನಿಂದಿಸಿದಂತಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತನಾಗಿರುವ ನಂದಗಾಂವ ಗ್ರಾಮದ ಅರುಣ, ಸಂತ್ರಸ್ಥೆಯ ಜೊತೆ ತಾಯಿಯಾದವಳು ಮಾತನಾಡುವಾಗ ಬಳಕೆ ಮಾಡಿರುವ ಶಬ್ಧದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಅವರನ್ನ ತನಿಖೆಗೆ ಒಳಪಡಿಸಿ ಕಾನೂನು ಕ್ರಮವನ್ನ ಜರುಗಿಸುವಂತೆ ಆಗ್ರಹಿಸಿದ್ದಾರೆ.