Posts Slider

Karnataka Voice

Latest Kannada News

ಪದವಿ ಕಾಲೇಜು ನವೆಂಬರ್ 1ರಿಂದ ಆರಂಭ: ಯುಜಿಸಿ ಅನೌನ್ಸ್

Spread the love

ನವದೆಹಲಿ: ಪದವಿ ಕಾಲೇಜುಗಳ ಪ್ರಸಕ್ತ ವರ್ಷದ ಶೈಕ್ಷಣಿಕ ವೇಳಾಪಟ್ಟಿಯನ್ನ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪ್ರಕಟಿಸಿದ್ದು, ಕೇಂದ್ರ ಸಚಿವ ಡಾ.ರಮೇಶ ಪೋಕ್ರಿಯಾಲ್ ನಿಶಂಕರವರು ಟ್ವೀಟ್ ಮೂಲಕ ಪ್ರಸ್ತಾವಿತ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯನ್ನ ಪ್ರಕಟಿಸಿದ್ದಾರೆ.

ಈ ವೇಳಾಪಟ್ಟಿಯ ಪ್ರಕಾರ ನವೆಂಬರ್ 1ರಿಂದ ಪದವಿ ಕಾಲೇಜುಗಳು ಆರಂಭವಾಗಲಿದ್ದು, 2021ರ ಆಗಸ್ಟ್ 30ಕ್ಕೆ ಪದವಿ ಶೈಕ್ಷಣಿಕ ವರ್ಷ ಮುಗಿಯಲಿದೆ. ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ 8ರಿಂದ 23ರ ನಡುವೆ ನಡೆಯಲಿದೆ. ಎರಡನೇಯ ಸೆಮಿಸ್ಟರ್ ಏಪ್ರೀಲನಿಂದ ಆರಂಭಗೊಳ್ಳಲಿದ್ದು,  ಪರೀಕ್ಷೆಗಳು ಆಗಸ್ಟನಲ್ಲಿ ನಡೆಯಲಿವೆ.

ಒಮ್ಮೆ ಸಾಮಾನ್ಯ ತರಗತಿಗಳು ಆರಂಭಗೊಂಡ ನಂತರ ವಾರದಲ್ಲಿ ಆರು ದಿನಗಳ ಕಾಲ ತರಗತಿಗಳನ್ನ ನಡೆಸಬೇಕು. ಬೇಸಿಗೆ ಮತ್ತು ಚಳಿಗಾಲದಲ್ಲಿ ರಜೆಗಳು ಇರುವುದಿಲ್ಲವೆಂದು ಯುಜಿಸಿ ಹೇಳಿದೆ.

ಅಕ್ಟೋಬರ್ 31ರೊಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಯುಜಿಸಿ ಹೇಳಿದೆ. ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಪದವಿ ತರಗತಿಯ ಪ್ರವೇಶ ರದ್ದು ಮಾಡಲು ಅಥವಾ ಬೇರೆ ಕಾಲೇಜಿಗೆ ಪ್ರವೇಶ ಪಡೆಯಲು ಪೋಷಕರು ಬಯಸಿದರೇ, ಪಾವತಿಸಿರುವ ಶುಲ್ಕವನ್ನ ಹಿಂತಿರುಗಿಸಬೇಕೆಂದು ಯುಜಿಸಿ ಹೇಳಿದೆ.


Spread the love

Leave a Reply

Your email address will not be published. Required fields are marked *