ಸಿಎಂ ಪುತ್ರ ನವಲಗುಂದ ಕ್ಷೇತ್ರದಲ್ಲಿ: ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸಾಥ್

ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಿಂದ ಇಂಗಳಳ್ಳಿ ಗ್ರಾಮದವರೆಗೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ವಿಜಯೇಂದ್ರ, ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪರ ಕಾರ್ಯ ವೈಖರಿಯನ್ನ ಕೊಂಡಾಡಿದರು. ಕ್ಷೇತ್ರದ ಸಲುವಾಗಿ ಮುನೇನಕೊಪ್ಪ ಎಷ್ಟೊಂದು ಕಾಳಜಿ ವಹಿಸುತ್ತಾರೆಂಬುದನ್ನ ಉದಾಹರಣೆ ಸಮೇತ ವಿವರಿಸಿದರು.
ಈ ಸಮಯದಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಜಿಪಂ ಸದಸ್ಯೆ ಚೈತ್ರಾ ಶಿರೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.