ಚೀನಾ ಹದ್ದು ಮೀರಿ ವರ್ತನೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ಭಾರತ- ಚೀನಾ ಗಡಿಯಲ್ಲಿ ಘರ್ಷಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಚೈನಾದು ಹದ್ದುಮೀರಿದ ನಡವಳಿಕೆ. ನಾವು ಶಾಂತಿ ಬಯಸಿದ್ರೇ, ಅವರು ಈ ರೀತಿ ನಡೆದುಕೊಂಡು ಗೊಂದಲ ಉಂಟು ಮಾಡುತ್ತಿದ್ದಾರೆಂದು ಹೇಳಿದರು.
ಚೀನಾಗೆ ತಕ್ಕ ಪಾಠ ಕಲಿಸುವ ಶಕ್ತಿ, ಸಾಮರ್ಥ್ಯ ಭಾರತಕ್ಕಿದೆ ಎಂದರು.
ಕಾರವಾನ್ ಮಿನಿ ಟೂರಿಸ್ಟ್ ಬಸ್ ಗಳಿಗೆ ಸಿಎಂ ಚಾಲನೆ ನೀಡಿ ಮಾತನಾಡುತ್ತಿದ್ದರು. ಡಿಸಿಎಂ ಅಶ್ವಥ್ ನಾರಾಯಣ, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಅಧಿಕಾರಿಗಳು ಸಿಎಂ ಗೆ ಸಾಥ್ ನೀಡಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಿನಿ ಬಸ್ ಗಳಿಗೆ ಚಾಲನೆ ನೀಡಿಇದರು. ಬಾತ್ ರೂಂ, ಟಾಯ್ಲೆಟ್, ಬೆಡ್ ವ್ಯವಸ್ಥೆಗಳುಳ್ಳ ಐಶಾರಾಮಿ ಮಿನಿ ಬಸ್ ಇದಾಗಿದ್ದು, ಕುಟುಂಬ ಸಮೇತ ಬಸ್ ನಲ್ಲಿ ಪ್ರವಾಸ ಮಾಡಬಹುದು. ಸ್ಟಾರ್ಟ್ ಅಪ್ ಯೋಜನೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕಾರವಾನ್ ಮಿನಿ ಬಸ್ಗೆ ಚಾಲನೆ ನೀಡಲಾಗಿದೆ.
ಪ್ರವಾಸೋಧ್ಯಮದ ಬಗ್ಗೆ ಸಿಎಂ ಹೇಳಿಕೆ
ಕೋವಿಡ್ ನಿಂದಾಗಿ ಪ್ರವಾಸೋದ್ಯಮ ಕುಸಿತಗೊಂಡಿದೆ. ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಶೇ 14ರಷ್ಟಿದೆ. ಹಂಪಿ, ಕೊಡಗು ಸೇರಿದಂತೆ ರಾಜ್ಯದ ಹಲವು ಸ್ಥಳಗಳಿಗೆ ಕಾರವಾನ್ ನಿಯೋಜನೆ ಮಾಡಲಾಗುತ್ತದೆ. ಕೊರೋನಾದಿಂದಾಗಿ ಪ್ರವಾಸೋದ್ಯಮಕ್ಕೆ 15ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಕೊವೀಡ್ ನಂತರ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ ಎಂದರು.