Posts Slider

Karnataka Voice

Latest Kannada News

ಶಾಲೆಗಳಿಗೆ ದಸರಾ ರಜೆ ಘೋಷಣೆ: ಸಿಎಂ ಯಡಿಯೂರಪ್ಪ

Spread the love

ಬೆಂಗಳೂರು: ಕೋವಿಡ್- 19 ಹಿನ್ನೆಲೆಯಲ್ಲಿ ದಸರಾ ರಜೆಯನ್ನ ಸ್ಥಗಿತಗೊಳಿಸಿ ಈ ಹಿಂದೆ ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆಯ ನಿರ್ಧಾರವನ್ನ ರದ್ದುಗೊಳಿಸಿ, ನಾಳೆಯಿಂದ ಅಕ್ಟೋಬರ್ 30 ರ ವರೆಗೆ ರಜೆ ಘೋಷಣೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.


ಜುಲೈನಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಕೂಡಾ ದಸರಾ ರಜೆಯನ್ನ ಕೊಡಿ ಎಂದು ಕೇಳಿಕೊಂಡಿದ್ದರು. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಮನವಿ ಮಾಡಿಕೊಂಡಿತ್ತು.

????????????????????????????????????????????
????????????????????????????????????????????
*ಸನ್ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ರವರು ಪ್ರಸ್ತುತ ಸಂದರ್ಭದಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಶಿಕ್ಷಕರ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಜಗತ್ ಪ್ರಸಿದ್ಧವಾದ ನಾಡ ದಸರಾ ಹಬ್ಬದ ಪ್ರಯುಕ್ತ ದಿನಾಂಕ :12/10/2020 ರಿಂದ 30/10/2020 ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಿದ್ದಾರೆ*

*ಆದೇಶವನ್ನು ಸಹೃದಯದಿಂದ ಸ್ವಾಗತಿಸುತ್ತ ಸನ್ಮಾನ್ಯರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ನಾಡ ಹಬ್ಬ ದಸರೆಯ ಪ್ರಯುಕ್ತ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ವತಿಯಿಂದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇವೆ*
????????????????????????????????????????????
????????????????????????????????????????????
*ತಮ್ಮ ಸೇವೆಯಲ್ಲಿ*
*ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು*
*ಹಾಗೂ ಸರ್ವ ಪದಾಧಿಕಾರಿಗಳು*
*ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)*
*ರಾಜ್ಯ ಘಟಕ ಹುಬ್ಬಳ್ಳಿ.*
????????????????????????????????????????????


Spread the love

Leave a Reply

Your email address will not be published. Required fields are marked *