CM-EM-ಮೇಲ್ಮನೆ ಸಭಾಪತಿ & ಆಯುಕ್ತರಿಗೆ ವರ್ಗಾವಣೆ ಕುರಿತು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹಿಸಿದ್ದೇನು…!?

ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆಯಂಬ ಬಿಳಿಯಾನೆಯನ್ನ ಮುಗಿಸುವ ಮನಸ್ಸನ್ನ ರಾಜ್ಯ ಸರಕಾರ ಹೊಂದದೇ ಇರುವುದು, ಶಿಕ್ಷಕ ಸಮೂಹದಲ್ಲಿ ತೀವ್ರ ಥರದ ಬೇಸರವನ್ನ ಮೂಡಿಸುತ್ತಿದೆ. ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶಕುಮಾರ, ಇಲಾಖೆಯ ಆಯುಕ್ತರು ಹಾಗೂ ಮೇಲ್ಮನೆ ಸಭಾಪತಿಗಳಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪತ್ರವನ್ನ ಬರೆದಿದೆ.

ವರ್ಗಾವಣೆಯ ಪ್ರಕ್ರಿಯೆಯನ್ನ ಏಳೆಂಟು ತಿಂಗಳು ಮಾಡಲು ಮುಂದಾಗಿರುವ ವಿಷಯವೇ ಇದೀಗ ಚರ್ಚೆಗೆ ಕಾರಣವಾಗಿದೆ. ಶಿಕ್ಷಕರು ವರ್ಗಾವಣೆಯ ಚಿಂತೆಯಲ್ಲಿ ದಿನಗಳನ್ನ ಕಳೆಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರದಲ್ಲಿ ಸವಿವರವಾಗಿ ಮಾಹಿತಿಯನ್ನ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಂ.ಸಜ್ಜನ, ಮಲ್ಲಿಕಾರ್ಜುನ ಉಪ್ಪಿನ, ಪರಿಷ್ಕೃತ ವೇಳಾಪಟ್ಟಿಯನ್ನ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.