ಮಕ್ಕಳಿಗೆ ಸಮವಸ್ತ್ರ ನೀಡಿ: ಸಿಎಂಗೆ ಮನವಿ ಮಾಡಿಕೊಂಡ ಗ್ರಾಮೀಣ ಶಿಕ್ಷಕರ ಸಂಘ..
1 min readಧಾರವಾಡ: ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ಸಮವಸ್ತ್ರವನ್ನ ಇನ್ನೂ ನೀಡದೇ ಇರುವುದನ್ನ ಗಮನಕ್ಕೆ ತೆಗೆದುಕೊಂಡು, ತ್ವರಿತಗತಿಯಲ್ಲಿ ಮಕ್ಕಳಿಗೆ ಸಮವಸ್ತ್ರಗಳನ್ನ ವಿತರಣೆ ಮಾಡಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ವಿನಂತಿಸಿಕೊಂಡಿದೆ.
ಮನವಿ ಪತ್ರ
ಮಾನ್ಯರೆ….
ವಿಷಯ : 2021-22 ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾದ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ತ್ವರಿತ ಗತಿಯಲ್ಲಿ ವಿತರಣೆ ಮಾಡುವ ಕುರಿತು.
ಈ ಮೇಲ್ಕಾಣಿಸಿದ ವಿಷಯದ ಅನ್ವಯ ನಾವುಗಳಾದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ರಾಜ್ಯಘಟಕ ಹುಬ್ಬಳ್ಳಿಯ ರಾಜ್ಯಾಧ್ಯಕ್ಷರು.ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ .
2021-22 ನೇ ಶೈಕ್ಷಣಿಕ ವರ್ಷ ಆರಂಭವಾಗಿದೆ.ರಾಜ್ಯ ಸರಕಾರ ಈಗಾಗಲೇ 6 ರಿಂದ 12 ನೇ ತರಗತಿಗಳನ್ನು ಆರಂಭಿಸಿದೆ. ಶಾಲೆ ಆರಂಭಕ್ಕೂ ಮುನ್ನ ಮಕ್ಕಳಿಗೆ ಸಮವಸ್ತ್ರವನ್ನು ವಿತರಣೆ ಮಾಡಬೇಕಾಗಿತ್ತು ಕೋವಿಡ್ -19 ಇರುವ ಕಾರಣಾಂತರಗಳಿಂದ ಇದುವರೆಗೂ ವಿತರಣೆ ಮಾಡಿರುವುದಿಲ್ಲ. ಕಳೆದ ವರ್ಷ ಇದ್ದ ಸಮವಸ್ತ್ರಗಳನ್ನೇ ಮಕ್ಕಳು ಈ ವರ್ಷ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಕಾರಣವೇನೆಂದರೆ ಕಳೆದ ಒಂದು ವರ್ಷದಿಂದ ಖಾಸಗಿ ಶಾಲೆಯಿಂದ ಮಕ್ಕಳು ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರದ ಕೊರತೆ ಉಂಟಾಗಿದೆ.
ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಕೈಗೊಂಡ ನಿರ್ಣಯವನ್ನು ಸ್ವಾಗತ ಮಾಡುತ್ತೇವೆ. ಆದರೆ ಮಕ್ಕಳಿಗೆ ಕೂಡಲೇ ಸಮವಸ್ತ್ರ ನೀಡಿದರೆ ಅನೂಕುಲವಾಗುತ್ತದೆ. ಹಾಗೂ ತ್ವರಿತ ಗತಿಯಲ್ಲಿ ಮಕ್ಕಳಿಗೆ ಸಿದ್ದ ಉಡುಪುಗಳನ್ನು ಅಥವಾ ಸಮವಸ್ತ್ರವನ್ನು ವಿತರಿಸಬೇಕು. ಎರಡು ವರ್ಷದಿಂದ ನೀಡಿದ ಮಕ್ಕಳ ಸಮವಸ್ತ್ರಗಳು ಹರಿದು ಹೋಗಿವೆ. ಹಾಗೂ ಸ್ವಾಭಾವಿಕವಾಗಿ ಮಕ್ಕಳ ಬೆಳವಣಿಗೆ ಕೂಡ ಆಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮತ್ತು ಶಿಕ್ಷಣ ಇಲಾಖೆ ಆಯುಕ್ತರಿಗೆ ಸರಕಾರಿ ಗ್ರಾಮೀಣ ಪ್ರಾಥಮಿಕ ಹಾಗೂ ಪೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ, ಪವಾಡೆಪ್ಪ ಕಾಂಬಳೆ, ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಉಪ್ಪಿನ ಹಾಗೂ ಭೀಮಾಶಂಕರ್ ಬಡಿಗೇರ್, ಕಾರ್ಯಾಧ್ಯಕ್ಷ ರಾದ ಶರಣಪ್ಪಗೌಡ ಆರ್ ಕ.ಕೆ.ಬಿ.ಕುರಹಟ್ಟಿ, ಗೌರವ ಅಧ್ಯಕ್ಷ ಎಲ್ ವಾಯ್ ಲಕ್ಕಮ್ಮನ್ನವರ, ಸರ್ವ ಹಂತದ ಪದಾಧಿಕಾರಿಗಳು. ರಾಜ್ಯದ ಎಲ್ಲಾ ಶಿಕ್ಷಕರ ಹಾಗೂ ಮಕ್ಕಳ ಪರವಾಗಿ ಸರಕಾರಕ್ಕೆ ಕೂಡಲೇ ಉಚಿತ ಸಮವಸ್ತ್ರಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.