ಬಜೆಟ್ ನಲ್ಲಿ ಶಿಕ್ಷಕರ ಬೇಡಿಕೆ ಘೋಷಣೆಗೆ ಗ್ರಾಮೀಣ ಶಿಕ್ಷಕರ ಸಂಘದ ಒತ್ತಾಯ
1 min readಹುಬ್ಬಳ್ಳಿ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ 2021-22 ರ ಮಂಡಿಸಲಿರುವ ಬಜೆಟ್ ನಲ್ಲಿ ಪ್ರಮುಖ 6 ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ರಾಜ್ಯಘಟಕ ಹುಬ್ಬಳ್ಳಿಯ ಪದಾಧಿಕಾರಿಗಳು ಹಾಗೂ ರಾಜ್ಯದ ಶಿಕ್ಷಕರ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಬಡ ಮಕ್ಕಳ ಕಾಳಜಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಬಜೆಟ್ ನಲ್ಲಿ ಅಳವಡಿಸಿ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ
ಗ್ರಾಮೀಣ ಶಿಕ್ಷಕರ ಸಂಘದ ಪ್ರಮುಖ 6 ಬೇಡಿಕೆಗಳು
1.ಗ್ರಾಮೀಣ ಭಾಗದ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಪ್ರತಿ ಶಿಕ್ಷಕರಿಗೆ 5 ಸಾವಿರ ರೂ ಗಳನ್ನು ನೀಡಬೇಕು
2. ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲೇಖನ -ಸಾಮಗ್ರಿಗಳನ್ನು ಪೂರೈಸಬೇಕು
3.ರಾಜ್ಯದ ಎಲ್ಲಾ ಸರ್ಕಾರಿ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು .ಮಾಸಿಕ ರೂ 2500 ರೂಪಾಯಿ ವಿಶೇಷ ಭತ್ಯೆ ನೀಡಬೇಕು,ಎಲ್ಲಾ ಮುಖ್ಯಗುರುಗಳಿಗೆ ಸ್ಮಾರ್ಟ್ ಫೋನ್ ವ ಟ್ಯಾಬ್ ನೀಡಬೇಕು
4.ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಕರಿಗೂ ಲ್ಯಾಪ್ ಟಾಪ್ ನೀಡಬೇಕು
5.ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರಿಗೆ ಹಾಗೂ ಅವರ ಮಕ್ಕಳಿಗೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ನೀಡಬೇಕು
6.ಕ್ಲಸ್ಟರ್ ಗೆ 1 ಡಿಜಿಟಲ್ ಶಾಲೆ ಮಂಜೂರು ಮಾಡಬೇಕು
ರಾಜ್ಯದ ಸುಮಾರು 2,50,000 ಶಿಕ್ಷಕರ 52,000 ಶಾಲೆಗಳ ಹಾಗೂ 1 ಕೋಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ .ಎಸ್. ಯಡಿಯೂರಪ್ಪನವರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಸಾರಿಗೆ ಸಚಿವರು,ಗೋವಿಂದ್ ಕಾರಜೋಳ ಲೋಕೋಪಯೋಗಿ ಸಚಿವರು .ಡಾ॥ ಅಶ್ವಥ್ ನಾರಾಯಣ್ ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ ಸಚಿವರು ಹಾಗೂ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಎಸ್ .ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಎಸ್ ಶೆಟ್ಟರ ಮುಂತಾದ ಸಚಿವರಿಗೆ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಉಪ್ಪಿನ್ ಹಾಗೂ ಗ್ರಾಮೀಣ ಸಂಘದ ರಾಜ್ಯ ಪದಾಧಿಕಾರಿಗಳಾದ ಶರಣಪ್ಪಗೌಡ ಪವಾಡಪ್ಪ ಕಾಂಬ್ಳೆ, ಎಲ್ ಐ ಲಕ್ಕಮ್ಮನವರ, ಎಸ್ ಎಫ್ ಪಾಟೀಲ, ಎಮ್.ಆಯ್.ಮುನವಳ್ಳಿ, ಹನಮಂತಪ್ಪ ಮೇಟಿ, ಶರಣಬಸವ ಬನ್ನಿಗೋಳ, ಗೋವಿಂದ ಜುಜಾರೆ, ಮಹ್ಮದರಫಿ, ರಾಮಪ್ಪ ಹಂಡಿ, ರಾಜಶ್ರೀ, ಕುಸುಮಾ, ಲಕ್ಷ್ಮಿ, ದೇವಮ್ಮ ಮುಂತಾದವರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದ್ದಾರೆ