ಸಿಎಂ ಯಡಿಯೂರಪ್ಪ ಹಣೆಯೋದಕ್ಕೆ ಹೈಕಮಾಂಡ್ ಸಿದ್ಧವಾಗಿದೇಯಾ: ರಾಜ್ಯಸಭೆಯಲ್ಲೂ ಹಿನ್ನೆಡೆ
ನವದೆಹಲಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನ ಹಣಿಯಲು ಹೈಕಮಾಂಡ್ ಮುಂದಾಗಿದೇಯಾ ಎಂಬ ಪ್ರಶ್ನೆ ಇದೀಗ ಸಾಮಾನ್ಯ ಕಾರ್ಯಕರ್ತರಲ್ಲೂ ಏಳುವಂತಾಗಿದೆ. ಅದಕ್ಕೆ ಕಾರಣವಾಗಿದ್ದು, ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆ ವಿಚಾರ.
ಹೌದು.. ಸಿಎಂ ಯಡಿಯೂರಪ್ಪನವರ ಗಮನಕ್ಕೂ ಇಲ್ಲದಿರುವ ಎರಡು ಹೆಸರುಗಳನ್ನ ಬಿಜೆಪಿ ಹೈಕಮಾಂಡ್ ಅನೌನ್ಸ್ ಮಾಡಿದೆ. ಅಶೋಕ ಗಸ್ತಿ ಮತ್ತು ಕಡಾಡಿ ಅವರನ್ನೇ ಪೈನಲ್ ಮಾಡುವ ಸಣ್ಣ ಸುಳಿವು ಯಡಿಯೂರಪ್ಪನವರಿಗೆ ಇರಲಿಲ್ಲ. ಹೀಗಾಗಿ, ಸಿಎಂ ಬೇರೆದವರದ್ದೇ ಹೆಸರುಗಳನ್ನ ಕೇಂದ್ರಕ್ಕೆ ಕಳಿಸಿದ್ದರು.
ಬಿಜೆಪಿಯಲ್ಲಿ ಪ್ರತಿಕ್ಷಣ ಯಡಿಯೂರಪ್ಪನವರನ್ನ ಹಣೆಯಬೇಕೆಂಬ ಸಂಕಲ್ಪ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವೆಂಬ ಘಟನಾವಳಿಗಳು ನಡೆಯುತ್ತಿವೆ. ರಾಜ್ಯದಲ್ಲಿ ಬಿಜೆಪಿ ಅಂದ್ರೇ ಯಡಿಯೂರಪ್ಪ- ಯಡಿಯೂರಪ್ಪಅಂದ್ರೇ ಬಿಜೆಪಿ ಎಂಬ ಕಲ್ಪನೆಯನ್ನ ಮುರಿಯುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬ ಸ್ಪಷ್ಟ ಸಂದೇಶವನ್ನ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ರವಾನೆ ಮಾಡಿದೆಯೆನ್ನಬಹುದು.