“ಸುಮ್ಮನೆ ಶಾಲೆ ಆರಂಭಿಸಿ ಬೀಡಿ ಮಾರಾಯ್ರೇ”: ಸರಕಾರಕ್ಕೆ ಶಿಕ್ಷಕರಿಂದಲೇ ಚಾಟಿಯೇಟು..!
ಧಾರವಾಡ: ಸರಕಾರ ಕೊರೋನಾ ಸಮಯದಲ್ಲಿ ಹಲವು ಗೊಂದಲಗಳನ್ನ ಸೃಷ್ಟಿ ಮಾಡುತ್ತಿದೇಯಾ ಎಂಬ ಸಂಶಯ ಕಾಡಲಾರಂಭಿಸಿದ್ದು, ಜ್ಞಾನವಂತರನ್ನಿಟ್ಟುಕೊಂಡು ನಿರ್ಧಾರವನ್ನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಶಿಕ್ಷಣ ಇಲಾಖೆಯ ತೀರ್ಮಾನಗಳು ಶಿಕ್ಷಕಕರಲ್ಲಿ ಮತ್ತಷ್ಟು ಗೊಂದಲವನ್ನ ಸೃಷ್ಟಿ ಮಾಡುತ್ತಿದ್ದು ಅದೇ ಕಾರಣಕ್ಕೆ ಅವರು ಶಾಲೆಯನ್ನೇ ಆರಂಭಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರ ಕಣ್ಣು ತೆರೆಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.
ಮನೆ ಮನೆ ಭೇಟಿ ಬೇಡ.. ಶಾಲೆ ಪ್ರಾರಂಭಿಸಿ ಬಿಡಿ
ಸರದಿ ಪ್ರಕಾರ ಶಾಲಾ ಪ್ರಾಂಗಣದಲ್ಲಿ ಮಾರ್ಗದರ್ಶನ ಮಾಡಲು ನಾವು ಸಿದ್ಧ
ವಠಾರ ಶಾಲೆ ಕೊರೋನಾ ಹಾಟ್ ಸ್ಪಾಟ ಮಾಡಬೇಡಿ
ಶಿಕ್ಷಕರ ಮೇಲೆ ನಿಷ್ಕರುಣೆ ತೋರಬೇಡಿ..ಕರುಣೆ ತೋರಿ
ಶಿಕ್ಷಕ ಸಂಘಟನೆಗಳ ಅಳಲಿಗೆ ಕ್ಯಾರೆ ಅನ್ನದ ಶಿಕ್ಷಣ ಇಲಾಖೆ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ರಾಜ್ಯಘಟಕ, ಹುಬ್ಬಳ್ಳಿ ಸಿಎಂಗೆ ಬರೆದಿರುವ ಪತ್ರದ ಮುಖ್ಯಾಂಶ
ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು
ವಿಷಯ: ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆ ತುರ್ತಾಗಿ ಪರಿಗಣಿಸಿ ಪರಿಶೀಲಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ
ಮಾನ್ಯರೆ…
ರಾಜ್ಯದಲ್ಲಿ ಆಗಷ್ಟ 31 ರ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳ ಪ್ರಕಾರ ಶಾಲೆಗಳನ್ನು ತೆರೆಯುವಂತಿಲ್ಲ. ಆನ್ ಲೈನ್ ಹಾಗೂ ದೂರ ಶಿಕ್ಷಣ ಮೂಲಕ ಪ್ರೋತ್ಸಾಹಿಸಬೇಕು ಎಂದಿರುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿದ್ಯಾಗಮ ಎಂಬ ಮಾರ್ಗಸೂಚಿಯ ಸುತ್ತೋಲೆಯನ್ನು ದಿ.ಆಗಸ್ಟ್ 4ರಂದು ಹೊರಡಿಸಿದ್ದು ಇರುತ್ತದೆ ಮತ್ತು ದಿ.ಆಗಸ್ಟ್ 7ರಂದು ರಾಜ್ಯ ಹಂತದ ಇಲಾಖಾ ವಿ.ಸಿ ಯಲ್ಲಿ ಈ ಕುರಿತು ಚರ್ಚೆಯ ಮೂಲಕ ವಿಷಯ ತಿಳಿಯಪಡಿಸಿರುವಂತೆ ಮನೆ ಮನೆಗೆ ಭೇಟಿಮಾಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸೂಚಿಸಿರುವರು. ಆದರೆ, ಸಧ್ಯ ಮಹಾಪೂರ, ಪ್ರವಾಹ, ಭಾರೀ ಮಳೆ ಇದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು ಅಲ್ಲದೆ ಕೋವಿಡ್ -19 ಈಗಾಗಲೇ ಬಹಳ ಜನ ಶಿಕ್ಷಕ ಶಿಕ್ಷಕಿಯರಿಗೆ ಸೋಂಕು ತಗುಲಿ ಸಾವನ್ನಪ್ಪಿದ್ದು ಇದೆ. ರಾಜ್ಯದ ನಾಲ್ಕೈದು ಲಕ್ಷ ಶಿಕ್ಷಕರಲ್ಲಿ ಬಹುಪಾಲು ಮಹಿಳೆಯರು ಇದ್ದು , ವಿದ್ಯಾಗಮ ಕಾರ್ಯಾನುಷ್ಠಾನ ಮಾಡುವುದು ಕಷ್ಟಸಾಧ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವು ಈ ಸಂಗತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪೂರಕವಾದ ವಾತಾವರಣ ನಿರ್ಮಾಣವಾಗುವವರೆಗೆ ವಿದ್ಯಾಗಮ ಯೋಜನೆಯನ್ನು ಮಕ್ಕಳ ಶಿಕ್ಷಕರ ಪಾಲಕರ ಹಿತ ದೃಷ್ಟಿಯಿಂದ ಕರುಣಾಮಯಿಗಳಾದ ತಾವುಗಳು ವಿದ್ಯಾಗಮ ಕಾರ್ಯ ಯೋಜನೆಯನ್ನು ಅನಿರ್ದಿಷ್ಠ ಅವಧಿಯವರೆಗೆ ಸ್ಥಗಿತಗೊಳಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸೂಚಿಸಬೇಕೆಂದು ನಾಡಿನ ಸಮಸ್ತ ಶಿಕ್ಷಕರ ವತಿಯಿಂದ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ.ಗೌರವ ಸಲಹೆಗಾರ ಮಹೇಶ ಜೋಶಿ, ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಕಲ್ಪನ ಚಂದನಕರ, ಆರ್ ಎಂ ಕುರ್ಲಿ, ಶಿವಲೀಲಾ ಪೂಜಾರ, ಎಂ ವಿ ಕುಸುಮಾ, ಜಿ ಟಿ ಲಕ್ಷ್ಮೀದೇವಮ್ಮ, ರಾಜಶ್ರೀ ಪ್ರಭಾಕರ, ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ತಮ್ಮ ವಿಶ್ವಾಸಿಕರು
ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ವ ಪದಾಧಿಕಾರಿಗಳು
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ರಾಜ್ಯಘಟಕ, ಹುಬ್ಬಳ್ಳಿ.