ಕೊರೋನಾ ಗೆದ್ದು ಬಂದ 78 ವರ್ಷದ ಸಿಎಂ: ಆಗಸ್ಟ್ 15ರಂದು ಧ್ವಜಾರೋಹಣ ಮಾಡ್ತಾರೆ
ಬೆಂಗಳೂರು: 78 ವರ್ಷದ ಸಿಎಂ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಯಿಂದ 9 ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು. ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಯಡಿಯೂರಪ್ಪ 9 ದಿನಗಳ ನಂತರ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಸಿಎಂ ಬಿ.ಎಸ್.ಯಡಿಯೂರಪ್ಪ ಬಿಡುಗಡೆಯಾದ ಹಿನ್ನೆಯಲ್ಲಿ ವೈಧ್ಯರು ಬೀಳ್ಕೋಡುಗೆ ನೀಡಿದರು. ಪಿಪಿಇ ಕಿಟ್ ಧರಿಸಿ, ಹೊರಗೆ ಬಂದು ಸಿಎಂಗೆ ಕೈ ಮುಗಿದು ಬೀಳ್ಕೋಡುಗೆ ನೀಡಿದರು.
ಧ್ವಜಾರೋಹಣ ಮಾಡಲಿರುವ ಸಿಎಂ.
ಆಸ್ಪತ್ರೆಯಲ್ಲಿ ಸಿಎಂ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸು ಹಿನ್ನೆಲೆಯಲ್ಲಿ ಇಂದಿನಿಂದ ಒಂದೆರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಎಂದಿನಂತೆ ಕೆಲಸಕ್ಕೆ ಹಾಜರಾಗಲಿರುವ ಸಿಎಂ, ನಿಯಮದ ಪ್ರಕಾರ ಸಾಂವಿಧಾನಿಕ ಹುದ್ದೆ ಹೊಂದಿರೋರಿಗೆ ಕ್ವಾರಂಟೇನ್ ನಿಯಮದಿಂದ ವಿನಾಯ್ತಿಯಿದೆ. ಕೊರೋನಾ ಯೋಧರಿಗೆ ವಿನಾಯಿತಿ ನೀಡಲಾಗಿದೆ. ಆ ನಿಯಮದ ಪ್ರಕಾರ ಸಿಎಂ ಕ್ವಾರಂಟೇನ್ ಅವಧಿ ಕಡಿತಗೊಳಿಸಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ದಿನ ಧ್ವಜಾರೋಹಣವನ್ನ ಸಿಎಂ ಮಾಡಲಿದ್ದಾರೆ.