ಸಿಎಂ ಪುತ್ರಿಗೂ ಪಾಸಿಟಿವ್- ವಿಜಯೇಂದ್ರಗೆ ನೆಗೆಟಿವ್: ಇಂದು ಮನೆಯವರೆಲ್ಲರಿಗೂ ಕೊರೋನಾ ಟೆಸ್ಟ್

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಊಟೋಪಾಚಾರ ನೋಡಿಕೊಳ್ಳುತ್ರಿದ್ದ ಕಿರಿಯ ಪುತ್ರಿಗೂ ಪಾಸಿಟಿವ್ ಬಂದಿದೆ.
ನಿನ್ನೆ ಬಿಎಸ್ವೈ ಟೆಸ್ಟ್ ವೇಳೆ ಅವರಿಗೂ ಟೆಸ್ಟ್ ಮಾಡಲಾಗಿತ್ತು. ಬಿಎಸ್ವೈ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ನೆಗೆಟಿವ್ ಬಂದಿದೆ.
ಸಿಎಂ ಓಎಸ್ಡಿ ವಿಜಯ್ ಮಹಾಂತೇಶ್ರಿಗೂ ನೆಗೆಟಿವ್ ಬಂದಿದ್ದು, ವಿಜಯೇಂದ್ರ ಒಂದು ವಾರ ಸೆಲ್ಫ ಕ್ವಾರಂಟೈನ್ನಲ್ಲಿರಲು ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಬಿಎಸ್ವೈ ಮನೆಯಲ್ಲಿರುವ ಎಲ್ಲರಿಗೂ ಟೆಸ್ಟ್ ಮಾಡುವ ಸಾಧ್ಯತೆಯಿದೆ ಎಂದು ಸಿಎಂ ಮಾಧ್ಯಮ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.