ಶಾಲೆ ಆರಂಭದ ಬಗ್ಗೆ ಈಗಷ್ಟೇ ಸಿಎಂ ಹೇಳಿದ್ದೇನು.. ಎಕ್ಸಕ್ಲೂಸಿವ್ ಪತ್ರ ಇಲ್ಲಿದೆ ನೋಡಿ..
1 min readಬೆಂಗಳೂರು: ಶಾಲೆಯ ಆರಂಭದ ಬಗ್ಗೆ ಸಿಎಂ ಯಡಿಯೂರಪ್ಪ ಇಂದು ಮತ್ತೊಂದು ಮನವಿ ಮಾಡಿಕೊಂಡಿದ್ದು, ಶಾಲೆ ಆರಂಭದ ಬಗ್ಗೆ ಯಾವುದೇ ಊಹಾಪೋಹಗಳು ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಈ ಬಗ್ಗೆ ಮನವಿ ಮಾಡಿಕೊಂಡಿರುವ ಸಿಎಂ ಯಡಿಯೂರಪ್ಪ, ಕೋವಿಡ್-19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನ ಆರಂಭಿಸುವ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಅಂತಹ ತೀರ್ಮಾನಗಳು ಸಧ್ಯಕ್ಕೀಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಶಾಲೆಗಳನ್ನ ಆರಂಭಿಸುವ ಬಗ್ಗೆ ಎಲ್ಲರೊಂದಿಗೆ ಸಮಾಲೋಚನೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಹೇಳಿರುವ ಸಿಎಂ, ಪಾಲಕರು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.