ಸಿಎಂ ಆಗಿ ಹೇಳಿದ ಮ್ಯಾಲೆ ಅದು ಆಗಬೇಕು-ಇದು ನನ್ನ ಕೊನೆ ಸಭೆ: ಎಚ್ಚರಿಕೆ ನೀಡಿದ ಸಿಎಂ- Exclusive Video
ಬೆಂಗಳೂರು: ನಾನು ಮುಖ್ಯಮಂತ್ರಿ ಆಗಿ ಹೇಳಿದ ಮೇಲೆ ಅದು ಆಗಬೇಕು. ಯಾವುದೇ ನೆಪಗಳನ್ನ ಹೇಳಬಾರದೆಂದು ಸಿಎಂ ಯಡಿಯೂರಪ್ಪ, ಸಹೋದ್ಯೋಗಿಗಳ ಮುಂದೆ ಗರಂ ಆದ ಘಟನೆ ನಡೆದಿದೆ.
ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಸಭೆ ನಡೆಸಿದ ವೇಳೆಯಲ್ಲಿ, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ.
ವೈದ್ಯಕೀಯ ಉಪಕರಣಗಳ ಖರೀದಿ ಯಲ್ಲಿ ಅಕ್ರಮ ವಿಚಾರ. ಡಬಲ್ ರೇಟ್ ಕೊಟ್ಟು ಖರೀದಿ ಮಾಡಲಾಗಿದೆ ಅಂತ ಆರೋಪ ಬರ್ತಿದೆ. ವಿಪಕ್ಷಗಳ ಬಾಯಿಗೆ ಆಹಾರ ಆಗಬೇಡಿ. ಲೆಕ್ಕ ಕೊಡಿ ಅಂತ ವಿಪಕ್ಷ ಕಾಂಗ್ರೆಸ್ ಹೇಳ್ತಿದೆ. ನಾನು ನಿಮಗೆ ಕೇಳುತ್ತಿದ್ದೇನೆ. ಖರ್ಚು ಮಾಡಿದ ಪ್ರತಿ ಪೈಸೆಯ ಲೆಕ್ಕ ಕೊಡಬೇಕೆಂದು ಎಚ್ಚರಿಸಿದರು.
ಬಿಐಇಸಿ ಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಬೆಡ್‌ಗಳನ್ನು ಬಾಡಿಗೆಗೆ ತಂದಿದ್ದು ಯಾಕೆ..? ಎರಡು ತಿಂಗಳಲ್ಲಿ ಅದರ ಬಾಡಿಗೆ ಎಷ್ಟಾಗುತ್ತದೆ..? ಬಿಐಇಸಿಯಲ್ಲಿ ಬೆಡ್ ಬಾಡಿಗೆಗೆ ಪಡೆಯದೇ ಖರೀದಿ ಮಾಡಿ. ನಂತರ ಅವುಗಳನ್ನು ಬೇರೆಯದಕ್ಕೆ ಬಳಸಿಕೊಳ್ಳಿ. ಆಂಬ್ಯುಲೆನ್ಸ್ ಯಾಕೆ ಇನ್ನೂ ಖರೀದಿ ಆಗಿಲ್ಲ. ನಾನು ಇನ್ನೊಂದು ಬಾರಿ ಸಭೆ ಮಾಡಿದಾಗ ಯಾವ ಸಮಸ್ಯೆಗಳೂ ಇರಕೂಡದು. ಇದು ಕೊನೆಯ ಬಾರಿಯ ಲಾಕ್ ಡೌನ್ ಅಷ್ಟೇ. ಮುಂದಿನ ಸಭೆಯ ವೇಳೆಗೆ ಸಮಸ್ಯೆ ಪರಿಹರಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ತರಾಟೆಗೆ ತೆಗೆದುಕೊಂಡರು.