Posts Slider

Karnataka Voice

Latest Kannada News

CID ಅಧಿಕಾರಿಯ “ಕಣ್ಣಾ ಮುಚ್ಚೆ ಕಾಡೇ ಗೂಡೇ”- ಬಡವರ ಪರ ನಿಂತ “ಬಸವರಾಜ ಕೊರವರ”…!!!

1 min read
Spread the love

ಧಾರವಾಡದ ಬಳಿ ಕೈಗಾರಿಕಾ ಕಾರಿಡಾರ್ ನೆಪದಲ್ಲಿ ಕೆಲವು ಪ್ರಮುಖ ಮಾಜಿ ಮುಖ್ಯಮಂತ್ರಿ ಸೇರಿದಂತೆ ಕೆಲವು ರಾಜಕಾರಣಿಗಳು ಎರಡು ಸಾವಿರ ಎಕರೆಯಲ್ಲಿ ಹಗರಣ ಮಾಡಿದ್ದು, ಆ ದಾಖಲೆಗಳು ಕೂಡಾ ಬಹಿರಂಗ ಆಗಲಿವೆ ಎಂದು ಬಸವರಾಜ ಕೊರವರ ಹೇಳಿದರು.

ಕೆಐಎಡಿಬಿ ಹಗರಣದ ದಾಖಲೆ ಬಿಡುಗಡೆ ಮಾಡಿದ ಬಸವರಾಜ ಕೊರವರ

ಧಾರವಾಡ: ಕೆಐಎಡಿಬಿ ಹಗರಣದ ಸಿಐಡಿ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು.

ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಐಎಡಿಬಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಬಹುಕೋಟಿ ಹಗರಣ ನಡೆಸಲಾಗಿದೆ. ಈ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಈ ಪ್ರಮುಖ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ. ಹೀಗಾಗಿ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ನೇಮಿಸಬೇಕು ಎಂದು ಒತ್ತಾಯಿಸಿದರು.

ಒಂಬತ್ತು ತಿಂಗಳ ಕಾಲ ತನಿಖೆ ನಡೆಸಿ, ಎರಡು ಹಂತದ ಚಾರ್ಜ್ ಶೀಟ್ ಹಾಕಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಪುಟದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅದರಲ್ಲಿ ಹಲವು ಹಿರಿಯ ಅಧಿಕಾರಿಗಳನ್ನು ಮತ್ತು ಕೆಲ ಮಧ್ಯವರ್ತಿಗಳನ್ನು ಪ್ರಕರಣದಿಂದ ಬಚಾವ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದಾಖಲೆ ಬಿಡುಗಡೆಗೊಳಿಸಿದರು. ಸರ್ಕಾರದ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವವರಿಗೆ ಶಿಕ್ಷೆಯಾಗಬೇಕು ಅಲ್ಲಿಯವರೆಗೆ ಜನಜಾಗೃತಿ ಸಂಘ ನಿರಂತರ ಹೋರಾಟ ಮಾಡುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು.

ಧಾರವಾಡದ ಬಳಿ ಕೈಗಾರಿಕಾ ಕಾರಿಡಾರ್ ನೆಪದಲ್ಲಿ ಕೆಲವು ಪ್ರಮುಖ ಮಾಜಿ ಮುಖ್ಯಮಂತ್ರಿ ಸೇರಿದಂತೆ ಕೆಲವು ರಾಜಕಾರಣಿಗಳು ಎರಡು ಸಾವಿರ ಎಕರೆಯಲ್ಲಿ ಹಗರಣ ಮಾಡಿದ್ದು, ಆ ದಾಖಲೆಗಳು ಕೂಡಾ ಬಹಿರಂಗ ಆಗಲಿವೆ ಎಂದು ಬಸವರಾಜ ಕೊರವರ ಹೇಳಿದರು.

ಯಾವ್ಯಾವ ರಾಜಕಾರಣಿಗಳು ಇರಬಹುದು ಗೊತ್ತಾ…


Spread the love

Leave a Reply

Your email address will not be published. Required fields are marked *

You may have missed