ಹುಬ್ಬಳ್ಳಿಯ “ರೌಡಿಷೀಟರ್” ಮನೆಯಲ್ಲಿ ಸಿಕ್ಕ “ತಲ್ವಾರ”ಗಳೆಷ್ಟು: ಪೊಲೀಸ್ ಕಮೀಷನರ್ ಹೇಳಿದ್ದೇನು…!?

ಹುಬ್ಬಳ್ಳಿ: ಛೋಟಾ ಮುಂಬೈನ ಸಂದಿಗೊಂದಿಗಳಲ್ಲಿಂದು ಪೊಲೀಸರ ಬೂಟಿನ ಸದ್ದು ಕೇಳಿಸಿದ್ದು, ಹಲವು ರೌಡಿ ಷೀಟರಗಳ ಮನೆಯಲ್ಲಿ ತಲ್ವಾರಗಳು ಸಿಕ್ಕಿದ್ದು, ಪೊಲೀಸ್ ದಾಳಿಯಿಂದ ಬಹಿರಂಗವಾಗಿದೆ.
ಈ ಬಗ್ಗೆ ಪೊಲೀಸ್ ಕಮೀಷನರ್ ಲಾಬುರಾಮ್ ಹಾಗೂ ಕನ್ನಡವನ್ನ ಕಲಿಯುತ್ತಿರುವ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಹೇಳಿದ್ದಾರೆ ನೋಡಿ..
ಹಳೇಹುಬ್ಬಳ್ಳಿ ಮತ್ತು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲ್ವಾರಗಳು ಸಿಕ್ಕಿದ್ದು, ಪ್ರತ್ಯೇಕ ಪ್ರಕರಣಗಳನ್ನ ದಾಖಲು ಮಾಡಲಾಗಿದೆ.
ಉತ್ತರ ವಿಭಾಗ ಮತ್ತು ದಕ್ಷಿಣ ವಿಭಾಗದ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಯಿತಾದರೂ, ನಾಮೀ ರೌಡಿಗಳು ಕಾಣದೇ ಇರುವುದು ಕೂಡಾ ಕಂಡು ಬಂದಿದೆ.