ಚಿತ್ರದುರ್ಗ: ಸೀ ಬರ್ಡ್ ಬಸ್-ಕಂಟೇನರ್ ಡಿಕ್ಕಿ, ಹೊತ್ತಿ ಉರಿದ ವಾಹನಗಳು- ಸುಟ್ಟು ಕರಕಲಾದ ಪ್ರಯಾಣಿಕರು…
ಚಿತ್ರದುರ್ಗ: ಹಿರಿಯೂರು ಬಳಿಯ ಗೊರ್ಲತ್ತು ಗ್ರಾಮದ ಬಳಿ ಸೀ ಬರ್ಡ್ ಖಾಸಗಿ ಬಸ್ ಮತ್ತು ಕಂಟೇನರ್ ನಡುವೆ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ ಹಲವು ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ವೀಡಿಯೋ…
ಬೆಳಗಿನ ಜಾವ ಘಟನೆ ನಡೆದಿದ್ದು ಬಸ್ ಸಂಪೂರ್ಣವಾಗಿ ಸುಟ್ಡು ಹೋಗಿದ್ದು, ಕರಕಲಾಗಿರುವ ಪ್ರಯಾಣಿಕರ ಅಳಿದುಳಿದ ದೇಹಗಳನ್ನ ಹೊರಗೆ ತೆಗೆಯಲಾಗುತ್ತಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.
