ಹಾಡು ಹಗಲೇ ಚಿರತೆ ದಾಳಿ, ಕರು ಬಲಿ

ಮೈಸೂರು: ಹಾಡುಹಗಲೇ ಚಿರತೆ ದಾಳಿ ಮಾಡಿ ಕರುವನ್ನ ಬಲಿ ತೆಗೆದುಕೊಂಡ ಘಟನೆ ಎಚ್ ಡಿ ಕೋಟೆ ನಾಗರಹೊಳೆ ಅರಣ್ಯವ್ಯಾಪ್ತಿಯ ತಾ.ನೇರಳೆ ಹೊಸೂರು ಗ್ರಾಮದಲ್ಲಿ ಸಂಭವಿಸಿದೆ.
ಮಹೇಶ್ ಎಂಬುವರಿಗೆ ಸೇರಿದ ಕರುವನ್ನ ಬಲಿ ತೆಗೆದುಕೊಂಡಿರುವುದರಿಂದ ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ನಾಗರಹೊಳೆ ಅಭಯಾರಣ್ಯದಂಚಿನ ಗ್ರಾಮಗಳಲ್ಲಿ ನಿರಂತರವಾಗಿರುವ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿದ್ದು, ಚಿರತೆ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು, ಸಾಧ್ಯವಾದಷ್ಟು ಬೇಗನೇ ಚಿರತೆಯನ್ನ ಹಿಡಿಯುವ ಭರವಸೆಯನ್ನ ನೀಡಿದ್ದಾರೆ.