ರಾಮನಗರದಲ್ಲಿ ನರಭಕ್ಷಕ ಚಿರತೆ: ಕರಡಿಗಳ ಹಾವಳಿ: ತತ್ತರಿಸಿದ ಜನತೆ

ರಾಮನಗರ: ದನಗಾಹಿ ವೃದ್ಧನ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ವೃದ್ಧ ಹನುಮಂತಯ್ಯ ಪಾರಾದ ಘಟನೆ ಮಾಗಡಿ ತಾಲೂಕಿನ ಕಸಬ ಹೋಬಳಿಯ ತೊರಚೇನಹಳ್ಳಿಯಲ್ಲಿ ನಡೆದಿದೆ.
ದನಗಳನ್ನು ಕಾಯುತ್ತಿದ್ದಾಗ ದಾಳಿ ಮಾಡಿರುವ ನರಭಕ್ಷಕ ಚಿರತೆ, ಚಿರತೆ ಕಂಡು ಭಯ ಬಿದ್ದು ಕಲ್ಲುಬಂಡೆ ಹತ್ತಲು ಮುಂದಾಗಿದ್ದ ಹನುಮಂತಯ್ಯನನ್ನ ಕಾಲು ಹಿಡಿದು ಎಳೆದಾಡಿ ಗಾಯಮಾಡಿದೆ. ವೃದ್ಧನ ರೈತನ ಕಾಲಿಗೆ ಗಾಯಪಡಿಸಿ ಬಳಿಕ ಕುರಿ ಕೊಂದು ಚಿರತೆ ಅಲ್ಲಿಂದ ಹೋಗಿದೆ.
ಮಾಗಡಿಯಲ್ಲಿ ಚಿರತೆಯ ಹಾವಳಿಯಿದ್ದಾಗಲೇ ಚನ್ನಪಟ್ಟಣದ ಎಂ.ಜಿ ರಸ್ತೆಯ ಸುಣ್ಣದಕೇರಿಯಲ್ಲಿ ಮಹಿಳೆ ಮೇಲೆ ಕರಡಿಯೊಂದು ದಾಳಿ ಮಾಡಿದೆ. ಮಾಜಿ ನಗರಸಭಾ ಉಪಾಧ್ಯಕ್ಷೆ ಸಾಕಮ್ಮ ಮೇಲೆ ಕರಡಿ ದಾಳಿ ಮಾಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.