ಕಾಡಲ್ಲಿ ಕಣ್ಮರೆಯಾದ ಕವಲಗೇರಿಯಲ್ಲಿ ಸಿಕ್ಕ “ಗಂಡು ಚಿರತೆ”…!

ಧಾರವಾಡ: ತಾಲೂಕಿನ ಕವಲಗೇರಿ ಗ್ರಾಮದಲ್ಲಿ ರವಿವಾರ ಬೆಳಗಿನ ಜಾವ ಬೋನಿನಲ್ಲಿ ಕಂಡು ಬಂದಿದ್ದ ಗಂಟು ಚಿರತೆಯನ್ನ ದಾಂಡೇಲಿ ಸಮೀಪದ ದಟ್ಟ ಅರಣ್ಯದಲ್ಲಿ ಇಲಾಖೆಯ ಅಧಿಕಾರಿಗಳು ಬಿಟ್ಟು ಬಂದಿದ್ದಾರೆ.
ಧಾರವಾಡ ತಾಲೂಕಿನ ಕವಲಗೇರಿ, ಹಾರೋಬೆಳವಡಿ, ಕಬ್ಬೇನೂರ ಮತ್ತು ಗೋವನಕೊಪ್ಪದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ವಾರಗಟ್ಟಲೇ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ್ದರು.
ಕವಲಗೇರಿಯ ಉಪ್ಪಾರ ಎನ್ನುವವರ ಹೊಲದಲ್ಲಿ ಕಬ್ಬು ಇದ್ದ ಪರಿಣಾಮ, ಆರು ಕಡೆಗಳಲ್ಲಿ ಬೋನ್ ಇಡಲಾಗಿತ್ತು. ಅದರಲ್ಲಿ ಒಂದು ಬೋನಿನಲ್ಲಿ ಚಿರತೆ ಸಿಕ್ಕು, ನೆಮ್ಮದಿಯನ್ನ ಮೂಡಿಸಿತ್ತು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾಗೃತೆಯಿಂದ ದಾಂಡೇಲಿ ಸಮೀಪದ ದಟ್ಟ ಅರಣ್ಯದಲ್ಲಿ ಚಿರತೆಯನ್ನ ಬಿಟ್ಟು ಬಂದಿದ್ದಾರೆ. ಹುಬ್ಬಳ್ಳಿಯಲ್ಲಿ ಕಂಡು ಬಂದಿದ್ದು, ಇದೇ ಚಿರತೆಯಾ ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.