ಭಕ್ತರಿಗೆ ದರ್ಶನ ನೀಡದ ಚಿಂಚಲಿ ಮಾಯಮ್ಮ: ಮಹಾರಾಷ್ಟ್ರದವರ ಅಂಜಿಕೆ
ಚಿಕ್ಕೋಡಿ: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನ ಭಾಗ್ಯ ಸದ್ಯಕ್ಕೆ ಇಲ್ಲವಾಗಿದೆ. ಇಂದಿನಿಂದ ರಾಜ್ಯದ ಎಲ್ಲಾ ದೇವಾಲಯಗಳು ತೆರೆದರೂ, ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನ ಮಾತ್ರ ತೆರೆಯುವುದಿಲ್ಲ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿರುವ ದೇವಸ್ಥಾನ. ಕರ್ನಾಟಕಕ್ಕಿಂತ ಮಹಾರಾಷ್ಟ್ರದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಸ್ಥಾನ. ಜೂನ್ 30 ವರೆಗೆ ಮಾಯಕ್ಕಾ ದೇವಸ್ಥಾನ ಒಪನ್ ಮಾಡೊದಿಲ್ಲ ಎಂದು ದೇವಸ್ಥಾನ ಕಾರ್ಯದರ್ಶಿ ಯಲ್ಲಪ್ಪಾ ಮಲಾಜುರೆ ಹೇಳಿದ್ದಾರೆ.
ಕೊರೋನಾ ಹಿನ್ನಲೆ ಭಕ್ತರ ಹಿತದೃಷ್ಟಿಯಿಂದ ದೇವಸ್ಥಾನ ತೆರೆಯದಿರಲು ಆಡಳಿತ ಮಂಡಳಿನಿರ್ಧಾರಿಸಿದೆ. ಭಕ್ತರು ತಮ್ಮ ಮನೆಯಲ್ಲಿಯೇ ದೇವಿಯ ಪೂಜೆ ಮಾಡಿ, ಕೊರೋನಾ ತಡೆಗಟ್ಟಲು ಸಹಕರಿಸಿ ಎಂದು ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.