ಸಾಲ ತೀರಿಸಲು 3ಲಕ್ಷಕ್ಕೆ ಕಂದಮ್ಮನನ್ನ ಮಾರಾಟ ಮಾಡಿದ ಪಾಲಕರು- ಖರೀದಿಸಿದವನೂ ಅರೆಸ್ಟ್…

ಸಾಲ ತೀರಿಸಲು ಹೆತ್ತ ಮಗುವನ್ನೇ ಮಾರಾಟ ಮಾಡಿದ ತಂದೆ
ಧೈರ್ಯ ತೋರಿದ ಅಂಗನವಾಡಿ ಕಾರ್ಯಕರ್ತೆ
ದಾಂಡೇಲಿ: ಸಾಲ ತೀರಿಸಲಾಗದೇ ಹೆತ್ತ ಮಗುವನ್ನೇ ಮಾರಾಟ ಮಾಡಿದ ಪ್ರಕರಣವನ್ನು ಬೇದಿಸುವಲ್ಲಿ ದಾಂಡೇಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ದೂರು ನೀಡಿ ಧೈರ್ಯ ಮೆರೆದಿರುವ ಅಂಗನವಾಡಿ ಕಾರ್ಯಕರ್ತೆ ದಾಂಡೇಲಿ ಕೊಗಿಲಬನ ನಿವಾಸಿ ರೇಶ್ಮಾ ಮಹಾದೇವ ಪಾವಸ್ಕರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ತಂದೆ ತಾಯಿಗಳೇ ಮಾರಾಟ ಮಾಡಿದ ಮತ್ತು ಮಗುವನ್ನು ಖರಿದಿಸಿದ ಆರೋಪಿಗಳನ್ನ ಬಂಧನ ಮಾಡಲಾಗಿದೆ. ಸಾಲ ತೀರಿಸಲಾಗದೇ ಹೆತ್ತ ಮಗುವನ್ನೆ 3 ಲಕ್ಷ ರೂಪಾಯಿಗೆಗೆ ಮಾರಾಟ ಮಾಡಿದ್ದರು.
ಕಂದಮ್ಮನನ್ನು ಕಾನೂನು ಬಾಹಿರವಾಗಿ ಖರೀದಿಸಿದ ಆರೋಪಿಗಳಾದ ಬೆಳಗಾವಿಯ ನೂರ್ ಅಹಮ್ಮದ್ ಅಬ್ದುಲ್ ಮಜೀದ್ ಹಾಗು ಕಿಶನ್ ಶ್ರೀಕಾಂತ್ ಐರೇಕರ್ ಇವರನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದಾರೆ.