ಧಾರವಾಡ: ಮಕ್ಕಳನ್ನ ಅಪಹರಿಸಿದ್ದ “ಕ್ರಿಮಿ”ಯ ಇಂಚಿಂಚೂ ಮಾಹಿತಿ- Exclusive Details With Photos
ಧಾರವಾಡ: ಕಮಲಾಪುರದ ಸರ್ಕಾರಿ ಶಾಲೆಯ ಇಬ್ಬರು ಮಕ್ಕಳನ್ನು ಅಪಹರಿಸಿದ್ದ ಆರೋಪಿ ಅಬ್ದುಲ್ ಕರೀಂ, ಅತಿಯಾದ ಮದ್ಯಸೇವನೆ ಮಾಡಿ ಅಪಘಾತಕ್ಕೀಡಾಗುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆಯ ವಿವರ: ಧಾರವಾಡದ ಶಾಲೆಯ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಹೊಂಚು ಹಾಕಿದ್ದ ಆರೋಪಿ, ಚಾಕೋಲೇಟ್ ಆಸೆ ತೋರಿಸಿ ಮಕ್ಕಳನ್ನು ಬೈಕ್‌ನಲ್ಲಿ ಅಪಹರಿಸಿದ್ದ. ಹಳಿಯಾಳದವರೆಗೆ ಸುಮಾರು 100 ಕಿ.ಮೀ ದೂರ ಮಕ್ಕಳನ್ನು ಕರೆದೊಯ್ದಿದ್ದ ಈತ, ದಾರಿಯುದ್ದಕ್ಕೂ ಮದ್ಯ ಸೇವನೆ ಮಾಡಿದ್ದಾನೆ. ಹಳಿಯಾಳದ ಬಳಿ ಮಕ್ಕಳಿಗೆ ಕಬ್ಬು ತಿನ್ನಲು ಕೊಟ್ಟು ತಾನು ಮತ್ತೆ ಮದ್ಯ ಸೇವಿಸಿದ್ದಾನೆ.
ಅಪಘಾತದಿಂದ ಬಯಲಾದ ಕೃತ್ಯ: ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.
ಹಳೆಯ ಕ್ರಿಮಿನಲ್ ಹಿನ್ನೆಲೆ: ಈ ಹಿಂದೆ 2018ರಲ್ಲೂ ಹಳಿಯಾಳದ ಶಾಲಾ ಬಾಲಕಿಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದು, ಕೈಕಾಲು ಕಟ್ಟಿ ದೌರ್ಜನ್ಯಕ್ಕೆ ಯತ್ನಿಸಿದ್ದ. ಅಂದು ಕೂಡ ಮದ್ಯದ ಅಮಲಿನಲ್ಲಿ ಈತ ಬಿದ್ದಾಗ ಬಾಲಕಿ ತಪ್ಪಿಸಿಕೊಂಡಿದ್ದಳು. ಈತ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದ ಎಂಬ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.
