2 ವರ್ಷದ ಪೋರನಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ ಅಸುರರು…!

ಕಲಬುರಗಿ: ಮನೆಯ ಜನರ ನೆಮ್ಮದಿಯ ಕೇಂದ್ರಬಿಂದುವಾಗಿ ಎರಡು ವರ್ಷದ ಬಾಲಕನಿಗೆ ಚಿತ್ರ ಹಿಂಸೆಯನ್ನ ನೀಡಿ ಕೊಲೆ ಮಾಡಿರುವ ಪ್ರಕರಣ ಕಲಬುರಗಿಯ ಫಿರ್ದೋಸ್ ನಗರದಲ್ಲಿ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನದಿಂದ ಕಾಣೆಯಾಗಿದ್ದ ಮೊಹ್ಮದ ಮುಜಾಮಿಲ್ ಎಂಬ ಬಾಲಕನಿಗಾಗಿ ಮನೆಯವರೆಲ್ಲ ಹುಡುಕಾಟ ನಡೆಸಿದ್ದರು. ಆದರೆ, ಕೊಲೆ ಮಾಡಿ ಬಾಲಕನನ್ನ ಚೀಲದಲ್ಲಿ ತುಂಬಿ ಮರಳಿನಲ್ಲಿ ಮುಚ್ಚಿ ಹಾಕಿದ್ದು ಗೊತ್ತಾಗಿದೆ.
ಬಾಲಕ ಮೊಹ್ಮದನಿಗೆ ಅರೆಬೆತ್ತಲೆ ಮಾಡಿ ಸಿಗರೇಟ್‌ನಿಂದ ದೇಹದ ತುಂಬೆಲ್ಲ ಚುಚ್ಚಿ ಹತ್ಯೆ ಮಾಡಲಾಗಿದೆ. ತದನಂತರ ನಿರ್ಮಾಣ ಹಂತದ ಕಟ್ಟಡದ ಬಳಿ ಹಾಕಲಾಗಿದ್ದ ಮರಳಿನ ಗುಡ್ಡೆಯಲ್ಲಿ ಶವವನ್ನ ಮುಚ್ಚಿಡಲಾಗಿತ್ತು. ಕಾರ್ಮಿಕರು ಮರಳು ಅಗೆಯುವಾಗ ಬಾಲಕನ ಶವ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದು, ಎರಡು ವರ್ಷದ ಬಾಲಕನಿಗೆ ಇಷ್ಟೊಂದು ಹಿಂಸೆ ನೀಡಿ, ಕೊಲೆ ಮಾಡಿರುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.