ಧಾರವಾಡ: ಏನಾತೋ ಏನೋ “ಮೋರಿಯಲ್ಲಿ ಗಂಡು ಮಗು” ಬಿಟ್ಟು ಹೋದ ಹೆತ್ತವ್ವ….
1 min readಧಾರವಾಡ: ಹುಟ್ಟಿದ ಗಂಡು ಕೂಸನ್ನ ಮೋರಿಯಲ್ಲಿ ಹೆತ್ತವ್ವಳೋರ್ವಳು ಬಿಟ್ಟು ಪ್ರಕರಣ ಧಾರವಾಡದ ರೌನಕಪುರ ಮಸೀದಿಯ ಬಳಿ ನಡೆದಿದ್ದು, ಮಗುವನ್ನ ಉಪಚಾರಕ್ಕಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೋರಿಯಲ್ಲಿ ಮಗುವಿನ ಅಳುವ ಶಬ್ದ ಬರುತ್ತಿರುವುದನ್ನ ಗಮನಿಸಿದ ಸಾರ್ವಜನಿಕರು, ತಕ್ಷಣ ಮಗುವನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಮಗು ಆರೋಗ್ಯವಾಗಿದೆ ಎಂದು ಗೊತ್ತಾಗಿದೆ.
ಯಾವ ಹೆತ್ತವ್ವ ಎಂತಹ ದುಗುಡದಲ್ಲಿ ಹೀಗೆ ಮಾಡಿದ್ದಾಳೋ ಗೊತ್ತಿಲ್ಲ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.