ಮನೆ ದೀಪ ಬೇರೆಯವರ ಮಡಿಲಿನಲ್ಲಿ: ಈ ಮಗುವಿನ ತಂದೆ-ತಾಯಿಯನ್ನ ಹುಡುಕಿ ಕೊಡಿ.. ಪ್ಲೀಸ್
ಹುಬ್ಬಳ್ಳಿ: ಸುಮಾರು ನಾಲ್ಕು ವರ್ಷದ ಹೆಣ್ಣು ಮಗುವೊಂದು ದೀಪಾವಳಿಯ ಮುನ್ನಾ ದಿನ ಹುಬ್ಬಳ್ಳಿ ಕೆ.ಕೆ. ನಗರದ ಕರ್ಕಿ ಬಸವೇಶ್ವರ ಗುಡಿಯ ಹತ್ತಿರ ಅನಾಥವಾಗಿ ಸಿಕ್ಕಿದ್ದು, ಈ ಬಾಲಕಿಗೆ ತಂದೆ-ತಾಯಿಯನ್ನ ಹುಡುಕಿ ಕೊಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೆ.ಕೆ.ನಗರದ ನಿವಾಸಿ ಸಾಬಣ್ಣ ಕಿಣಕೇರಿ ಎಂಬುವವರಿಗೆ ಈ ಮಗು ಸಿಕ್ಕಿದ್ದು ಹೆಸರನ್ನು ರುಕ್ಸಾನಾ ಎಂದು ಹೇಳುತ್ತಾಳೆ. ಎಲ್ಲಿಯವಳು ಎಂದು ಕೇಳಿದರೇ ಬೆಳಗಾವಿ ಎಂದಷ್ಟೇ ಹೇಳುತ್ತಿದ್ದಾಳೆ. ಆದರೆ, ತಂದೆ-ತಾಯಿ ಹೆಸರಾಗಲಿ ಊರು ಹೆಸರಾಗಲಿ ಹೇಳದೇ ಇರುವುದು, ಮಗುವಿನ ಪಾಲಕರ ಬಗ್ಗೆ ಪತ್ತೆ ಮಾಡುವುದು ಸಮಸ್ಯೆಯಾಗುತ್ತಿದೆ.
ಈ ಅನಾಥ ಮಗುವನ್ನ ಘಂಟಿಕೇರಿಯ ಬಾಲಕಿಯರ ಬಾಲ ಮಂದಿರದಲ್ಲಿ ಸಂರಕ್ಷಣೆ ಮಾಡಲಾಗಿದ್ದು, ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೇ ತಕ್ಷಣವೇ ನಿಮ್ಮ ಸಮೀಪವಿರುವ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಇಲ್ಲವೇ ನಮ್ಮ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ನೀಡಿ.
ದೀಪಾವಳಿಯ ದಿನವೇ ನಾಲ್ಕು ವರ್ಷದ ಮಗು ಅನಾಥವಾಗಿದ್ದು, ಬೇಸರ ಮೂಡಿಸಿದೆ. ಹೀಗಾಗಿ ಹಬ್ಬದ ಮೂಡಿನಲ್ಲಿರುವ ನೀವೂ ಈ ಭಾವಚಿತ್ರವನ್ನ ನಿಮ್ಮ ಮೊಬೈಲನಲ್ಲಿ ಹಾಕಿಕೊಂಡು ಹುಡುಕುವ ಪ್ರಯತ್ನವನ್ನ ಮಾಡಿದರೇ ಒಳ್ಳೆಯದಾಗತ್ತೆ.