ಚಿಕ್ಕತಿರುಪತಿಯಲ್ಲಿ ಶ್ರೀನಿವಾಸಯ್ಯನಿಂದ ಚೀಟಿ ನಾಮ: ಐದು ಕೋಟಿ ವಂಚನೆ
1 min readಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಗ್ರಾಮದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ಶ್ರೀನಿವಾಸಯ್ಯ ಎಂಬಾತನಿಂದ ಐದು ಕೋಟಿ ವಂಚನೆ ನಡೆದಿದೆ ಎಂದು ಆತನ ಮನೆಯೆದುರು ಜನ ಪ್ರತಿಭಟನೆ ನಡೆಸಿದರು.
2 ಲಕ್ಷ, 3 ಲಕ್ಷ, 5 ಲಕ್ಷ ರೂಪಾಯಿ ಮೌಲ್ಯದ ಚೀಟಿ ವ್ಯವಹಾರ ನಡೆಸುತ್ತಿದ್ದ ಶ್ರೀನಿವಾಸಯ್ಯ, ಲಾಕ್ ಡೌನ್ ಸಮಯದಲ್ಲೂ ಅದನ್ನ ಮುಂದುವರೆಸಿದ್ದ. ಹಣ ಕೊಡುವ ಸಮಯ ಬಂದಾಗ ತಪ್ಪಿಸಿಕೊಂಡು ಅಲೆದಾಡುತ್ತಿದ್ದಾನೆಂದು ದೂರಿದ ನೂರಾರೂ ಜನರು, ಆತನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕಅಂತರವನ್ನ ಮಾಡದೇ ಹೋರಾಟ ನಡೆದಿದ್ದು, ಮಾಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ತಹಬದಿಗೆ ತರಲು ಪ್ರಯತ್ನ ಮಾಡುತ್ತಿದ್ದಾರೆ.