ಚಿಕ್ಕತಿರುಪತಿಗೆ ದೌಡಾಯಿಸುತ್ತಿರುವ ಭಕ್ತರು: ಹಿಂಬದಿಯಿಂದಲೇ ಮುಡಿ ಸೇವೆ

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯಲ್ಲಿರುವ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಪ್ರಸನ್ನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಿಕ್ಕತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿರುವ ಭಕ್ತರಿಗೆ ಪೂಜೆಗೆ ಅವಕಾಶ ಕೊಡದ ಕಾರಣ ನಿರಾಸೆಯಾಗುತ್ತಿದೆ.
ದೇವಾಲಯ ಬಾಗಿಲು ಮುಚ್ಚಿದ್ದರು ದೇವಾಲಯದ ಹಿಂಭಾಗದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ. ನೂರಾರೂ ಭಕ್ತರು ಆಗಮಿಸಿದ್ದರೂ ಕೂಡಾ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೇವಾಲಯದ ಹೊರವಲಯದಲ್ಲಿ ಮುಡಿ ಸೇವೆ ನಡೆಯುತ್ತಿದ್ದು, ನುರಾರೂ ಜನ ಭಾಗವಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮಾತ್ರ ಮೌನ ತಾಳಿದ್ದಾರೆ.