ಸರಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಜಗಳವಾಡಿದ್ದೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಮಹಾರಾಷ್ಟ್ರದಲ್ಲಿ ವಾಸವಿದ್ದ ಬಾಗೇಪಲ್ಲಿ ಮೂಲದ 275 ಜನರನ್ನು ಚಿಕ್ಕಬಳ್ಳಾಪುರಕ್ಕೆ ಕರೆತರುವುದು ಬೇಡ ಎಂದಿದ್ದೆ. ಆರರಿಂದ ಏಳು ಬಸ್ ಗಳಿಂದ ಜನ ಬರುವುದು ಬೇಡವೆಂದಿದ್ದೇ. ಇದೇ ಕಾರಣಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾನು ಜಗಳ ಮಾಡಿದ್ದೆ. ಕೊನೆಗೆ ಅವರ ಒತ್ತಾಯದ ಮೇರೆಗೆ ನಾನು ಅನುಮತಿ ಕೊಟ್ಟೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮಾತನಾಡಿ, ಕೊನೆಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕ್ವಾರೆಂಟೇನ್ ಮಾಡಲು ಹೇಳಿದ್ದೇನೆ. ಹೊರ ರಾಜ್ಯಗಳಿಂದ ನಮ್ಮ ರಾಜ್ಯದವರನ್ನು ಕರೆತರಲು ಒಂದನೇ ತಾರೀಖಿನಿಂದ ಅವಕಾಶ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳಾಗ್ತವೆ. ನಿನ್ನೆ 45 ಇಂದು ಸಹ ಕೊರೋನಾ ಪ್ರಕರಣಗಳು ಬರಲಿವೆ. ಹಾಗಾಗಿ 100 ರಿಂದ 125 ಪ್ರಕರಣಗಳು ಪತ್ತೆಯಾಗಲಿವೆ. ಇಷ್ಟು ಮಂದಿಯನ್ನ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಟ್ಟು ಗುಣಮುಖ ಮಾಡೋದು ನಮ್ಮ ಕರ್ತವ್ಯ. ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಆತಂಕಪಡಬೇಡಿ ಎಂದು ಸುಧಾಕರ ಹೇಳಿದರು.