ಸೆ.07 ರಿಂದ ಬಿ.ಆರ್.ಟಿ.ಎಸ್ ನಿಯಮಿತ ನಿಲುಗಡೆ ಬಸ್ ಸಂಚಾರ ಆರಂಭ
1 min readಹುಬ್ಬಳ್ಳಿ: ಸರ್ಕಾರದ ಲಾಕ್ ಡೌನ್ ಸಡಲಿಕೆ ನಿಯಮದ ಅನುಸಾರ ಸೆ.07 ರಿಂದ ಬಿ.ಆರ್.ಟಿ.ಎಸ್ ನಿಯಮಿತ ನಿಲುಗಡೆಯ 100 ಡಿ ಬಸ್ಸ್ ಸಂಚಾರವನ್ನು ಪುನಃ ಆರಂಭಿಸಲಾಗುತ್ತಿದೆ.
ಹುಬ್ಬಳ್ಳಿ ಕೇಂದ್ರೀಯ ಬಸ್ ನಿಲ್ದಾಣದಿಂದ ಧಾರವಾಡ ಬಿ.ಆರ್.ಟಿ.ಎಸ್ ( ಮಿತ್ರ ಸಮಾಜ ) ಬಸ್ ನಿಲ್ದಾಣವರೆಗೆ ನಿಯಮಿತ ನಿಲುಗಡೆಯೊಂದಿಗೆ ಚಿಗರಿ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.
12 ಅನುಸೂಚಿಗಳಲ್ಲಿ ಬೆಳಿಗ್ಗೆ 07:30 ರಿಂದ ಸಾಯಂಕಾಲ 06:30 ವರೆಗೆ ಬಸ್ ಓಡಾಟವಿರಲಿದೆ. ಜನದಟ್ಟಣೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಸಮಯ ಹಾಗೂ ಅನೂಸೂಚಿಗಳನ್ನು ಹೆಚ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.