ನಾಟಿ ಕೋಳಿ ಕೆಜಿಗೆ 400ರೂಪಾಯಿಯಂತೆ: ಕಂಗಾಲಾದ ಗ್ರಾಹಕರು ಅಂಗಡಿಯಿಂದ ದೂರ

ಕೋಲಾರ: ಜಿಲ್ಲೆಯಲ್ಲಿ ಎಂದಿನಂತೆ ವಾಹನ, ಜನರ ಸಂಚಾರ ಆರಂಭಗೊಂಡಿದ್ದು, ಬಸ್ ನಿಲ್ದಾಣದಲ್ಲಿ ಕ್ಯೂ ನಿಂತು ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುತ್ತಿದೆ. ಬೆಂಗಳೂರಿಗೆ ಹೋಗಲು ಪ್ರಯಾಣಿಕರು ಕ್ಯೂ ಮೂಲಕ ಬಸ್ಸಗೆ ಹೋಗುತ್ತಿದ್ದಾರೆ.
ಈ ನಡುವೆ ಮಾಂಸ ಮಾರುಕಟ್ಟೆಯಲ್ಲಿ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ. ಚಿಕನ್, ಮಟನ್ ರೇಟ್ ಏರಿಕೆ ಹಿನ್ನಲೆ ಗ್ರಾಹಕರು ಬೆಳಿಗ್ಗೆಯಿಂದಲೇ ಕಂಗಾಲಾಗಿದ್ದಾರೆ. ಚಿಕನ್ 240, ಮಟನ್ 700 ರೂ ಒಂದು ಕೆಜಿಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರಿಲ್ಲದೆ ಮಾಂಸ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಒಂದು ಕೆಜಿ ನಾಟಿ ಕೋಳಿಗೆ 400 ರೂಪಾಯಿ ನಿಗದಿ ಮಾಡಿದ್ದರಿಂದಲೂ ನಾಟಿ ಕೋಳಿಯ ಮಾರಾಟವು ಇಲ್ಲವಾಗಿದ್ದು, ವ್ಯಾಪಾರಿಗಳು ಪರಿತಪಿಸುವಂತಾಗಿದೆ.