ಕೋಳಿ ಮತ್ತು ಮೊಟ್ಟೆಯಿಂದ ಕೊರೋನಾ ಬರೋದಿಲ್ಲ: ಸಚಿವ ಪ್ರಭು ಚವ್ಹಾಣ

ಬೆಂಗಳೂರು: ಕೋಳಿ ಮತ್ತು ಮೊಟ್ಟೆಯನ್ನ ತಿಂದರೇ ಕೊರೋನಾ ಬರುತ್ತದೆ ಎಂದು ವಂದತಿ ಹಬ್ಬಿರುವುದು ಸುದ್ಧ ಸುಳ್ಳು ಸುದ್ದಿ ಎಂದು ಸಚಿವ ಪ್ರಭು ಚವ್ಹಾಣ ಹೇಳಿದ್ದು, ಕೋಳಿ ಮತ್ಉ ಮೊಟ್ಟೆ ತಿಂದರೇ ಕೊರೋನಾ ಬರುವುದಿಲ್ಲ ಎಂದು ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಹಲವು ವದಂತಿಗಳಿಂದ ಕುಕ್ಕುಟೋಧ್ಯಮ ಹಾಳಾಗುತ್ತಿದೆ. ಇದಕ್ಕೆ ಸೂಕ್ತವಾದ ಮಾಹಿತಿಯನ್ನ ಸರಕಾರ ನೀಡಬೇಕೆಂದು ಕಾಂಗ್ರೆಸ್ ನ ಐವಾನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು, ಈಗಾಗಲೇ ಕೇಂದ್ರ ಸರಕಾರ ಕೋಳಿಯಿಂದ ಕೊರೋನಾ ಬರುವುದಿಲ್ಲವೆಂದು ಹೇಳಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಸರಕಾರ ಈ ಬಗ್ಗೆ ಜಾಗೃತೆ ಮೂಡಿಸಲಿದೆ ಎಂದು ಉತ್ತರಿಸಿದರು.