ಕಿತ್ತೂರು ಚೆನ್ನಮ್ಮನ ಆವರಿಸಿದ ಜೇನು: ಇಂತಹ ದೃಶ್ಯ ನೀವೇಂದೂ ನೋಡಿರಲೂ ಸಾಧ್ಯವೇಯಿಲ್ಲ..
ಹುಬ್ಬಳ್ಳಿ: ವಾಣಿಜ್ಯನಗರಿಯನ್ನ ಬಿಂಬಿಸುವ ಕಿತ್ತೂರು ಚೆನ್ನಮ್ಮನ ವೃತ್ತದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಜೇನು ಸಂಪೂರ್ಣ ಆವರಿಸಿದ್ದು, ನೋಡುಗರಲ್ಲಿ ಕೌತುಕ ಮೂಡಿಸಿದೆ.
ಹುಬ್ಬಳ್ಳಿಯ ಜನನಿಬೀಡ ಪ್ರದೇಶವಾದ ಕಿತ್ತೂರು ಚೆನ್ನಮ್ಮ ವೃತ್ತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಹುಬ್ಬಳ್ಳಿಯನ್ನ ಇದೇ ವೃತ್ತದಿಂದಲೂ ಲಕ್ಷಾಂತರ ಜನರು ಗುರುತಿಸುತ್ತಾರೆ ಕೂಡಾ.
ಈಗ ಕೆಲವೇ ನಿಮಿಷಗಳ ಹಿಂದೆ ಕಿತ್ತೂರು ಚೆನ್ನಮ್ಮನ ಪ್ರತಿಮೆಯ ಮುಖಕ್ಕೆ ಜೇನು ಸಂಪೂರ್ಣವಾಗಿ ಹತ್ತಿಕೊಂಡಿದ್ದು, ಮುಖ ಸಂಪೂರ್ಣವಾಗಿ ಕಾಣವಾಗಿದೆ. ಎಂದೂ ಇಂತಹ ದೃಶ್ಯ ಕಾಣದವರು ಇದನ್ನ ಕೌತುಕದಿಂದ ನೋಡುವಂತಾಗಿದೆ.
ಕಿತ್ತೂರು ಚೆನ್ನಮ್ಮನ ಮುಖಕ್ಕೆ ಅಂಟಿಕೊಂಡಿರುವ ಈ ಜೆನ್ನೋಣಗಳನ್ನ ಮಹಾನಗರ ಪಾಲಿಕೆ ನೋಡಿ, ತೆಗಸುವ ಪ್ರಯತ್ನ ಮಾಡಬೇಕಿದೆ.