Posts Slider

Karnataka Voice

Latest Kannada News

ಬೈಲಹೊಂಗಲದ ಕಿತ್ತೂರುರಾಣಿ ಚೆನ್ನಮ್ಮ ಸೊಸೈಟಿಗೆ ದಂಡ ವಿಧಿಸಿ, ಪರಿಹಾರಕ್ಕೆ ಆದೇಶ…

Spread the love

ಧಾರವಾಡ: ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಗಳಾದ ಅಮರೇಶ ಅಂಗಡಿ, ಆನಂದ ವಾಲ್ವೆಕರ ಹಾಗೂ ಶಿವನಗೌಡ ಪಾಟೀಲ ಇವರು ಹುಬ್ಬಳ್ಳಿಯ ಉಣಕಲ್ಲಿನಲ್ಲಿರುವ ಎದುರುದಾರರ ಸೊಸೈಟಿಯಲ್ಲಿ 2024 ರಲ್ಲಿ ಒಂದು ವರ್ಷದಅವಧಿಗೆ ರೂ:4,59,000, ರೂ:4,00,000 ಹಾಗೂ ರೂ:2,00,000 ಮೊತ್ತವನ್ನು ಖಾಯಂ ಠೇವಣಿ ಇಟ್ಟಿದ್ದರು. ಆ ಠೇವಣಿ ಅವಧಿ 2025 ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ ಎದುರುದಾರರು ಠೇವಣಿ ಹಣವನ್ನು ಕೊಡದೆ ತಮಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಹೇಳಿ ಸೊಸೈಟಿಯವರ ಎದುರುದಾರರ ಮೇಲೆ ಕ್ರಮಕೈಗೊಂಡು ತಮ್ಮ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತಮಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚು ಸಮೇತ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿನಾಂಕ 21.04.2025 ದೂರುಗಳನ್ನು ಸಲ್ಲಿಸಿದ್ದರು.

ಸದರಿ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ.ಬೋಳಶೆಟ್ಟಿ ಸದಸ್ಯರು ದೂರುದಾರರು ಎದುರುದಾರರ ಸೊಸೈಟಿಯ ಸದಸ್ಯರಾಗಿರುತ್ತಾರೆ. ದೂರುದಾರರು ಠೇವಣಿ ರೂಪದಲ್ಲಿ ಇಟ್ಟಂತಹ ಹಣವನ್ನು ಎದುರುದಾರರು ತಮ್ಮ ಸೊಸೈಟಿಯ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿರುವುದು ಕಂಡು ಬರುತ್ತದೆ. ಅಲ್ಲದೆ ಠೇವಣಿ ಅವಧಿ ಮುಗಿದಿದ್ದರೂ ದೂರುದಾರರು ಹಣವನ್ನು ಬಡ್ಡಿಯೊಂದಿಗೆ ಮರಳಿ ಕೊಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ತೀರ್ಪು ನೀಡಿದೆ. ಠೇವಣಿ ಇಟ್ಟ ದಿನಾಂಕಗಳಿಂದ ಶೇ.11 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡಲು ಎದುರುದಾರರಾದ ವಿರುಪಾಕ್ಷಿ ಶಿ. ಸಾದುನವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.


Spread the love

Leave a Reply

Your email address will not be published. Required fields are marked *