ಸರಕಾರದ ಚೆಕ್ ಬೌನ್ಸ್: ಖಾಲಿಯಾಯಿತೇ ಯಡಿಯೂರಪ್ಪ ಸರಕಾರದ ಖಜಾನೆ
1 min readತುಮಕೂರು: ಕಳೆದ ಫೆಬ್ರವರಿ 29ರಂದು ಮಗುವನ್ನು ತಿಂದಿದ್ದ ಚಿರತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಚೆಕ್ ಬೌನ್ಸ್ ಆಗಿದ್ದು, ಸರಕಾರದ ಖಜಾನೆ ಖಾಲಿಯಾಗಿದೇಯಾ ಎಂಬ ಸಂಶಯ ಮೂಡಿದೆ.
ಸಚಿವ ಆನಂದ್ ಸಿಂಗ್ ತಾವೇ ಬಂದು ಖುದ್ದು ಬಾಲಕನ ಮನೆಗೆ ಬಂದು ಏಳೂವರೆ ಲಕ್ಷ ಚೆಕ್ಕನ್ನು ನೀಡಿದ್ದರು. ಇದೀಗ ಚೆಕ್ಕನ್ನು ಬ್ಯಾಂಕಿಗೆ ಹಾಕಿದರೆ ಅಕೌಂಟ್ ನಲ್ಲಿ ದುಡ್ಡಿಲ್ಲವೆಂಬ ಕಾರಣಕ್ಕೆ ಬೌನ್ಸ್ ಆಗಿದೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರು ಯಾರು ಕೂಡ ಕೇರ್ ಮಾಡದೆ ರೈತನಿಗೆ ಅವಮಾನ ಮಾಡುತ್ತಿದ್ದಾರೆ.
ಚೆಕ್ ಬೌನ್ಸ್ ಆಗಿರುವ ಬಗ್ಗೆ ಹೇಳಿದರೂ ಕೂಡ ತಲೆಕೆಡಿಸಿಕೊಳ್ಳದ ಅಧಿಕಾರಿಗಳು. ಫೆಬ್ರುವರಿ 29 ರಂದು ತುಮಕೂರು ತಾಲೂಕಿನ ಬೈಚೇನಹಳ್ಳಿಯಲ್ಲಿ ಅಕ್ಕನ ಮುಂದೆಯೇ ಮಗು ಚಂದನನ್ನ ಎಳೆದುಕೊಂಡು ಹೋಗಿ ಚಿರತೆ ತಿಂದು ಹಾಕಿತ್ತು. ಆಗ ಶಾಸಕ ಗೌರಿಶಂಕರ್ ಆಕ್ರೋಶ ಹಿನ್ನೆಲೆ ಸಚಿವ ಆನಂದ್ ಸಿಂಗ್ ಬಂದು ಪರಿಹಾರ ಘೋಷಣೆ ಮಾಡಿದ್ದರು. ಶಾಸಕ ಗೌರಿಶಂಕರ್ ಕೂಡಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿ ಚೆಕ್ ನೀಡಿದ್ದರು, ಅದು ಕ್ಲೀಯರ್ ಆಗಿದ್ದು ಸಚಿವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ.