Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಹಳ್ಳಿ ಮಂದಿ”ಗೆ ಮತ್ತೊಂದು ವಂಚನೆ: ಬೀಗ ಹಾಕಿದ ಕಚೇರಿ…!

Spread the love

ಹುಬ್ಬಳ್ಳಿ: ನಗರದ ಸ್ಯಾಟ್ ಲೈಟ್ ಕಾಂಪ್ಲೇಕ್ಸನಲ್ಲಿರುವ ಸೇಫ್ ಹ್ಯಾಂಡ್ ವಿವಿದೋದ್ದೇಶಗಳ ಸಹಕಾರ ಸಂಘ ನಿಯಮಿತ ಕಚೇರಿಯ ಬೀಗ ಹಾಕಲಾಗಿದೆ. ಮಹಿಳೆಯರು ಕಚೇರಿಯ ಮುಂದೆ ಗೋಳಿಡುತ್ತಿದ್ದಾರೆ.

ಹೌದು.. ಸೇಫ್ ಹ್ಯಾಂಡ್ ಎಂಬ ನಾಮಕರಣದಿಂದ ಮಹಿಳೆಯರಿಂದ ಹಣ ತುಂಬಿಸಿಕೊಂಡು ಕಚೇರಿಯನ್ನ ತೆಗೆದಿದ್ದ ಕಚೇರಿಯು, ಯಾರಿಗೂ ಗೊತ್ತಿಲ್ಲದ ಹಾಗೇ, ಬೀಗ ಹಾಕಲಾಗಿದೆ.

ಈ ಸಂಬಂಧ ಹಣ ಕಳೆದುಕೊಂಡ ಹಲವು ಮಹಿಳೆಯರು ಕಚೇರಿಯ ಮುಂದೆ ಬಂದು ಪ್ರತಿಭಟನೆಯನ್ನ ಮಾಡಿದ್ರು. ತಮಗಾದ ಅನ್ಯಾಯವನ್ನ ಹೇಳಿಕೊಂಡರಾದರೂ, ಸಂಬಂಧಿಸಿದವರು ಯಾರೂ ಇಲ್ಲದೇ ಇರುವುದರಿಂದ ಮಹಿಳೆಯರು ಆಕ್ರೋಶವ್ಯಕ್ತಪಡಿಸಿದರು.

ಧಾರವಾಡ ಜಿಲ್ಲೆಯ ವಿವಿಧ ಗ್ರಾಮದ ಮಹಿಳೆಯರು ಹಣ ಹಾಕಿದ್ದಾರೆಂದು ಹೇಳಲಾಗಿದ್ದು, ಪ್ರತಿ ವಾರವೂ ಹಣವನ್ನ ಭರಿಸುತ್ತಿದ್ದರೆಂದು ಗೊತ್ತಾಗಿದೆ. ಹಣ ಕಳೆದುಕೊಂಡ ಮಹಿಳೆಯರು ಮಾತ್ರ, ಸಂಘದವರ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *