ಬೆಂಗಳೂರಿಂದ ಹುಬ್ಬಳ್ಳಿಗೆ ತಂದು “ಆಕೆಗೆ” ವಂಚಿಸಿದ Instagram ಚೀಟರ್…

ಹುಬ್ಬಳ್ಳಿ: ಪತಿಯ ಜೊತೆ ಇದ್ದವಳನ್ನ ಯಾಮಾರಿಸಿ ವಾಣಿಜ್ಯನಗರದಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯನ್ನ ಕರೆತಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅರವಿಂದ ಎಂಬಾತನೇ ನಂಬಿದ ಮಹಿಳೆಗೆ ವಂಚನೆ ಮಾಡಿದ ಕಿರಾತಕನಾಗಿದ್ದು, ಜೈಲೂಟಕ್ಕೆ ಪೊಲೀಸರು ಕಳಿಸಿದ್ದಾರೆ. ಇದೀಗ ಓರ್ವ ಮಹಿಳೆಯ ದೂರಿನ ಮೇರೆಗೆ ಬಂಧನವಾಗಿದ್ದು, ಈತ ಹಲವು ಮಹಿಳೆಯರಿಗೆ ವಂಚನೆ ಮಾಡಿದ್ದಾನೆಂದು ಗೊತ್ತಾಗಿದೆ.
ಇನ್ಸಪೆಕ್ಟರ್ ಆನಂದ ಒಣಕುದರಿ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.