“ಮತ್ತು” ಬರಿಸಿ ಚಿನ್ನ ಲೂಟಿ ಮಾಡುತ್ತಿದ್ದ “ಕುಲಕರ್ಣಿ” ಬಂಧಿಸಿದ ಕೇಶ್ವಾಪುರ ಠಾಣೆ ಪೊಲೀಸರು…

ಹುಬ್ಬಳ್ಳಿ: ಪೆಪ್ಸಿಯಂತಹ ಪಾನೀಯ ನೀಡಿ ಮತ್ತು ಬರಿಸಿ ಚಿನ್ನವನ್ನ ಲೂಟಿ ಮಾಡುತ್ತಿದ್ದ ವಂಚಕನೋರ್ವನನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಸುರೇಶ ಕುಲಕರ್ಣಿ ಎಂದು ಗುರುತಿಸಲಾಗಿದ್ದು, ಸುಮಾರು 50 ಗ್ರಾಂ ಚಿನ್ನದ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಗೋಪನಕೊಪ್ಪ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಸದಾಶಿವ ಕಾನಟ್ಟಿ, ಎಂ.ಡಿ.ಕಾಲವಾಡ, ಕೃಷ್ಣಾ ಕಟ್ಟಿಮನಿ, ಆನಂದ ಪೂಜಾರ, ವಿಠ್ಠಲ ಮಾದರ, ಎಸ್.ಎಸ್.ಕರೆಯಂಕಣ್ಣನವರ, ಚಂದ್ರು ಲಮಾಣಿ, ಎಸ್.ಎಸ್.ರಾಗಿ, ಹೆಚ್.ಆರ್.ರಾಮಾಪೂರ, ಮಹಾಲಿಂಗ ಬಾಳಿಗಿಡದ ಭಾಗವಹಿಸಿದ್ದರು.