“ಬೆಳೆ ಹಾನಿ ಪರಿಹಾರ ಬಂತು” 50-50 ವಂಚಕರ ಹಾವಳಿ ಮಾತ್ರ ತಪ್ಪಿಲ್ಲ… ಕೇಂದ್ರ ಸಚಿವರೇ ನೀವೂ ಹೇಳಿದ ನಂತರವೂ “ವಸೂಲಿ” ಜೋರಾಗಿದೆ….!!!

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಶತಪ್ರಯತ್ನ ಮಾಡಿ ರೈತರಿಗೆ ಅನುಕೂಲವಾಗಲಿ ಎಂದು ‘ಬರೋದೆ ಇಲ್ಲ’ ಎಂದುಕೊಂಡಿದ್ದ ಬೆಳೆ ವಿಮೆ ಪರಿಹಾರವನ್ನ ಕೊಡುಸುವಲ್ಲಿ ಯಶಸ್ವಿಯಾದರು. ಆದರೆ, ವಂಚನೆಯ ವಿಕಾರತೆ ಮಾತ್ರ ಮುಂದುವರೆದಿದೆ.
ಪರಿಹಾರ ಬಂದ ತಕ್ಷಣವೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪ್ರತಿಯೊಬ್ಬರಿಗೂ ಮನವಿ ಮಾಡಿಕೊಂಡು ಎಚ್ಚರಿಕೆ ನೀಡಿದ್ದರು. (ಪೂರ್ಣ ವೀಡಿಯೋ ನೋಡಿ)
ಈಗ ಕೆಲವು ರೈತರ ಅಕೌಂಟಿಗೆ ಹಣ ಬರಲಾರಂಭಿಸಿದೆ. ಹೆಬಸೂರು, ಕಿರೇಸೂರು, ಮಂಟೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅಕೌಂಟಿಂದ್ ಫಿಪ್ಟಿ-ಫಿಪ್ಟಿ ಹಣ ಪಡೆಯಲು ಆರಂಭಗೊಂಡಿದೆ.
ಹಾಲಿ ಶಾಸಕರೊಬ್ಬರ ಜೊತೆಗಾರರು ಎಂದು ಹೇಳಿಕೊಳ್ಳುವ ಹೆಬಸೂರ, ಕಿರೇಸೂರಿನ ಇಬ್ಬರು ಪ್ರಮುಖ ನಾಟಕ ಆರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ಜಿಪಂ ಸದಸ್ಯನಾಗಿದ್ದ ಸಾವುಕಾರನೂ ಸುಮ್ಮನೆ ಕೂತಿಲ್ಲ ಎಂಬುದು ರಹಸ್ಯವಾಗಿ ಉಳಿದಿಲ್ಲ.
ರೈತರಿಗೆ ಹಣ ಕೊಡಿ… ಹಣ ಕೊಡಿ ಎಂದು ಕೇಳುವ ಹಲವು ಆಡೀಯೋಗಳು ವೈರಲ್ ಆಗತೊಡಗಿವೆ. ಕೆಲವು ಚಾಣಾಕ್ಷ ಮೋಸಗಾರರು ಬೀಗರ ಮೂಲಕ ಹಣ ತೆಗೆಸಲು ಮುಂದಾಗಿರುವುದು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯಿದೆ.
ಮಂಟೂರ, ಬಂಡಿವಾಡ ಭಾಗದಲ್ಲಿ ಹಸಿರು ಟವೆಲ್ ಹಾಕಿಕೊಂಡು ರೈತ ನಾಯಕನಂತೆ ಫೋಸು ಕೊಡುವಾತ ಮತ್ತೂ ಮುಂದಿನ ತಾಲ್ಲೂಕು ಪಂಚಾಯತಿ ಮೆಂಬರ ನಾನೇ ಎಂದು ಹೇಳುವ ವಂಚಕ ಮೆಂಬರ ಡಾಕ್ಟರ್, ಹಣ ಬಂದ ರೈತರ ಬೆನ್ನು ಬಿದ್ದಿದ್ದಾರಂತೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೇ, ದಯವಿಟ್ಟು ಈ ಬಗ್ಗೆ ತಮ್ಮವರಿಂದ ಮಾಹಿತಿ ಪಡೆದು ವಂಚಕರನ್ನ ಹೆಡಮುರಿಗೆ ಕಟ್ಟಿಸಿ, ಇಲ್ಲದಿದ್ದರೇ ನೀವು ಪ್ರಯತ್ನ ಪಟ್ಟು ತಂದ 30 ಕೋಟಿ ಬೆಳೆ ಹಾನಿ ಪರಿಹಾರ ವಂಚಕರ ಜೇಬು ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.