ನಾನು ಚಪ್ಪಡಿ ಆಗ್ತೇನಿ: ನನ್ನ ತುಳಿದುಕೊಂಡು ಅಧಿಕಾರ ನಡೆಸಿ: ಡಿಕೆ ಶಿವಕುಮಾರ್
1 min readಬೆಂಗಳೂರು: ಇಡೀ ವಿಶ್ವವೇ ಕಾರ್ಯಕ್ರಮ ನೋಡಿದೆ. ಸಾಮಾಜಿಕ ಜಾಲತಾಣದಲ್ಲಿ 20 ಲಕ್ಷ ಜನ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ನನಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶಕ್ತಿ ತುಂಬಿದ್ದಾರೆ. ಇದು ದೊಡ್ಡ ಜವಾಬ್ದಾರಿ ಆಗಿ ಸ್ವೀಕರಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಡಿಕೆಶಿ, ವಿಧಾನ ಸೌಧದ ಮೂರನೇ ಮಹಡಿ ಹತ್ತೋರಿಗೆ ಚಪ್ಪಡಿ ಆಗ್ತೀನಿ. ಚಪ್ಪಡಿ ತುಳಿದುಕೊಂಡು ಮೂರನೇ ಮಹಡಿಗೆ ನಮ್ಮವರು ಹೋಗ್ಲಿ. ಕೆಲವರು ನನ್ನ ಬಂಡೆ ಅಂತಾರೆ ನಾನೂ ಬಂಡೆ ಆಗಲ್ಲ, ಚಪ್ಪಡಿ ಆಗ್ತೇನಿ ಎಂದರು.
ರಾಜ್ಯದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಸುಮ್ಮನೆ ಕೂರಲ್ಲ. ಕೊರೋನ ಬಳಿಕ ಕಾಂಗ್ರೆಸ್ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಹೇಳ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗುಡುಗಿದರು.