ಗಡಿ ಜಿಲ್ಲೆಗೆ ಪವರ್ ಸ್ಟಾರ್ ರಾಯಭಾರಿ

ಚಾಮರಾಜನಗರ: ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂದು ಅಪವಾದ ಹೊತ್ತುಕೊಂಡಿದ್ದ ಚಾಮರಾಜನಗರದ ರೂಪು-ರೇಷೆ ಬದಲಾಯಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಯಭಾರಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾಡಿದ್ದ ಮನವಿಗೆ ಪುನೀತ್ ರಾಜ್ ಕುಮಾರ್ ಒಪ್ಪಿಕೊಂಡಿದ್ದಾರಂತೆ.
ವರನಟ ಡಾ.ರಾಜ್ ಕುಮಾರ್ ಅವರ ತವರು ಜಿಲ್ಲೆ ಚಾಮರಾಜನಗರವಾಗಿದ್ದು ತಮ್ಮ ಇಳಿವಯಸ್ಸಿನ್ನು ತಾಳವಾಡಿಯ ತಮ್ಮ ತೋಟದ ಮನೆಯಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು. ಈಗ, ಅವರ ಮಗನಾದ ಪುನೀತ್ ಜಿಲ್ಲೆಯ ರಾಯಭಾರಿಯಾಗುತ್ತಿರುವುದರಿಂದ ನಗರಕ್ಕೆ ಮತ್ತಷ್ಟು ಚಾರ್ಮ್ ಬರುವ ನಿರೀಕ್ಷೆಯಿದೆ.