ಚಾಕುವಿನಿಂದ ಚುಚ್ಚಿಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ: ಮೊಬೈಲ್ ಮಾತಾಡುತ್ತಲೇ ಚಾಕು ಚುಚ್ಚಿಕೊಂಡ

ಮೈಸೂರು: ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರದಲ್ಲಿ ಮೊಬೈಲ್ ನಲ್ಲಿ ಯಾರೊಂದಿಗೋ ಮಾತನಾಡುತ್ತಾ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ವಿಷ್ಣು ಮೃತ ಕೂಲಿ ಕಾರ್ಮಿಕನಾಗಿದ್ದು, ಅಣ್ಣ ನಾರಾಯಣನ ಜೊತೆ ಮನೆಯಲ್ಲಿಯೇ ಇದ್ದಾಗ ಘಟನೆ ನಡೆದಿದೆ. ಮೊಬೈಲ್ ನಲ್ಲಿ ಯಾರೊಂದಿಗೋ ಮಾತನಾಡುತ್ತಾ ಚಾಕುವಿನಿಂದ ಇರಿದುಕೊಂಡ ತಕ್ಷಣವೇ ಕೆ.ಆರ್.ಆಸ್ಪತ್ರೆಗೆ ಅಣ್ಣ ಕರೆದೊಯ್ದರೂ, ಮಾರ್ಗಮಧ್ಯೆ ವಿಷ್ಣು ಸಾವನ್ನಪ್ಪಿದ್ದಾನೆ. ರೌಡಿ ಶೀಟರ್ ದಯಾನಂದ ಎಂಬುವರ ಮಕ್ಕಳಾಗಿರುವ ವಿಷ್ಣು ಹಾಗೂ ನಾರಾಯಣ. ನಾರಾಯಣನನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತ್ಮಹತ್ಯೆಗೆ ನಿಖರ ಮಾಹಿತಿ ಕಲೆ ಹಾಕುತ್ತಿದ್ದಾರೆ.