Posts Slider

Karnataka Voice

Latest Kannada News

“BJP MLA ಟಿಕೆಟ್”- 7ಕೋಟಿಗೆ ಕೊಡಿಸೋ ವಂಚನೆ: ಚೈತ್ರಾ ಕುಂದಾಪುರ ಅರೆಸ್ಟ್…

1 min read
Spread the love

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ

ರಹಸ್ಯ ಸ್ಥಳದಲ್ಲಿ ವಿಚಾರಣೆ

ಉಡುಪಿ: MLA ಟಿಕೆಟ್​ ಕೊಡಿಸೋದಾಗಿ 7 ಕೋಟಿ ವಂಚನೆ ಮಾಡಿರುವ ಹಿಂದೂ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅರೆಸ್ಟ್ ಆಗಿದ್ದಾರೆ. ಉಡುಪಿಯಲ್ಲಿ ಸಿಸಿಬಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಉಡುಪಿ ಮಠದ ಪಾರ್ಕಿಂಗ್​ ಪ್ಲೇಸ್​ನಲ್ಲಿ ಚೈತ್ರಾ ಸೇರಿ ನಾಲ್ವರ​ ಅರೆಸ್ಟ್​ ಮಾಡಲಾಗಿದೆ. ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆದಿದ್ದು, ಪೊಲೀಸರು ಇಂದು ಬೆಂಗಳೂರಿಗೆ ಕರೆತರಲಿದ್ದಾರೆ.


ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ಯಮಿ ಗೋವಿಂದ ಪೂಜಾರಿ ದೂರು ಆಧರಿಸಿ ಚೈತ್ರಾ ವಿರುದ್ದ IPC 420 (ವಂಚನೆ) ಅಡಿ ಪ್ರಕರಣ ದಾಖಲಾಗಿತ್ತು. ಬೈಂದೂರು ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದ ಆರೋಪ ಕೇಳಿಬಂದಿದೆ.ಕೇಂದ್ರದ ನಾಯಕರು, RSS ಪ್ರಮುಖರು ನನಗೆ ಚೆನ್ನಾಗಿ ಗೊತ್ತು. ಬೈಂದೂರು ಬಿಜೆಪಿ ಟಿಕೆಟ್​ ಕೊಡಿಸ್ತೀವಿ ಎಂದು ಹಣ ಪಡೆದಿದ್ದರು, ಆರೋಪಿಗಳು 3 ಹಂತದಲ್ಲಿ 7 ಕೋಟಿ ಹಣ ಪಡೆದಿದ್ದರು.
ಪ್ರಕರಣವನ್ನು CCBಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರಗಾಗಿ ಶೋಧ ಮಾಡುತ್ತಿದ್ದರು. ಒಟ್ಟು 8 ಮಂದಿ ಮೇಲೆ ವಂಚನೆ ಕೇಸ್​, ನಾಲ್ವರು ಸಿಸಿಬಿ ವಶಕ್ಕೆ ಪಡೆಯಲಾಗಿದೆ.
ಗಗನ್​ ಕಡೂರು, ಪ್ರಸಾದ್ ಎಂಬುವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೊಸಪೇಟೆಯ ಹಾಲಶ್ರೀ ಸ್ವಾಮೀಜಿ ಮೇಲೂ ವಂಚನೆ ಆರೋಪ ಕೇಳಿಬಂದಿದೆ. ಚೈತ್ರಾ ಕುಂದಾಪುರ ಪ್ರಖರ ಭಾಷಣದಿಂದಲೇ ಸುದ್ದಿಯಾಗುತ್ತಿದ್ದರು. ಶೆಪ್​ಟಾಕ್​ ಸಂಸ್ಥೆಯ MDಯಾಗಿದ್ದ ಗೋವಿಂದಬಾಬು ಪೂಜಾರಿ, ಹೋಟೆಲ್​​​​ ಮತ್ತು ಕ್ಯಾಟರಿಂಗ್​​ ಉದ್ಯಮ ನಡೆಸುತ್ತಿದ್ದರು.


Spread the love

Leave a Reply

Your email address will not be published. Required fields are marked *