ವ್ಯಾಪಾರಿಗಳ ಸೋಗಿನಲ್ಲಿ ಬಂದವರು ಮಾಡಿದ್ದೇನು ಗೊತ್ತಾ…? ಮಹಿಳೆಯರೇ ಅವರು ಮತ್ತೆ ಆ್ಯಕ್ಟಿವ್ ಆಗಿದ್ದಾರೆ ಹುಷಾರ್
ಕೋಲಾರ: ವ್ಯಾಪಾರಿಗಳಂತೆ ಬಂದು ಮಾತಾಡುತ್ತಲೇ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಕೋಲಾರದ ಕೀಲುಕೋಟೆ ಬಡಾವಣೆಯ ಅಂತರಗಂಗೆ ರಸ್ತೆಯಲ್ಲಿ ಘಟನೆ ನಡೆದಿದೆ.
ವ್ಯಾಪಾರ ಮಾಡುವ ಸೋಗಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು, ಸರ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಕೀಲುಕೋಟೆ ನಿವಾಸಿ ಭಾಗ್ಯಮ್ಮ ರಂಗನಾಥ್‌ರ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನ ದೋಚಲಾಗಿದೆ. ಮಹಿಳೆಯರು ಈ ಪ್ರಕರಣದಿಂದ ಎಚ್ಚೆತ್ತುಕೊಳ್ಳಬೇಕಿದೆ. ಏಕೆಂದರೆ, ಲಾಕ್‌ಡೌನ್ ಸಮಯದಲ್ಲಿ ಈ ಥರದ ಯಾವುದೇ ಘಟನೆಗಳು ನಡೆದಿರಲಿಲ್ಲ. ಈಗ ಮತ್ತೆ ಸರಗಳ್ಳರು ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ, ಅಪರಿಚಿತರೊಂದಿಗೆ ನಿಂತು ಮಾತನಾಡುವಾಗ ಮಹಿಳೆಯರು ಹುಷಾರಾಗಿರಬೇಕಾಗಿದೆ.
ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಕೋಲಾರ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.