ಕಂಡ ಕಂಡವರ ಕೊರಳಿಗೆ ಕೈ ಹಾಕುತ್ತಿದ್ದ “ತ್ರಿಮೂರ್ತಿ”ಗಳಿಗೆ ಕೊಳ ತೊಡಿಸಿದ ಧಾರವಾಡ ಪೊಲೀಸರು…
1 min readಧಾರವಾಡ: ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಪ್ರಕರಣವನ್ನ ಬೆನ್ನು ಹತ್ತಿದ್ದ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು, ಮೂವರನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗುವ ಜೊತೆಗೆ ಆರು ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದನ್ನ ಕಂಡುಕೊಂಡಿದ್ದಾರೆ.
ಹುಬ್ಬಳ್ಳಿಯ ಮಲ್ಲಿಕಾರ್ಜುನ ಬಡ್ನಿ ಎಂಬುವವರ ಕಾರು ಅಡ್ಡಗಟ್ಟಿ ಸುಲಿಗೆ ಮಾಡಲಾಗಿತ್ತು. ಯಾವುದೇ ಕುರುಹು ಇಲ್ಲದ ಪ್ರಕರಣವನ್ನ ತಾಂತ್ರಿಕವಾಗಿ ಪತ್ತೆ ಹಚ್ಚಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನ ನಾಗರಾಜ ಕನ್ನೇಶ್ವರ, ಬಾಬಾಜಾನ ಮುಜಾವರ ಮತ್ತು ವಿಶಾಲ ಭಜಂತ್ರಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಎರಡು ಬೈಕ್‌ಗಳನದನ ವಶಕ್ಕೆ ಪಡೆಯಲಾಗಿದೆ.
ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದಲ್ಲಿ ಪಿಎಸ್ಐಗಳಾದ ಬಾಬಾ, ಎಚ್.ಜಿ.ಪ್ರಮೋದ, ಮನೋಹರ ಮಲ್ಲಿಗವಾಡ, ಎಎಸ್ಐ ಐ.ಐ.ಮದರಖಂಡಿ, ಬಸವರಾಜ ಸವಣೂರ, ಸಿಬ್ಬಂದಿಗಳಾದ ಎಂ.ಸಿ.ಮಂಕಣಿ, ವಿ.ಐ.ಚವರೆಡ್ಡಿ, ಬಾಬು ದುಮ್ಮಾಳ, ಗಿರೀಶ ಬಿದರಳ್ಳಿ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಬಿ.ಎಂ.ಪಠಾತ, ವೈ.ಎಂ.ಮಹಾಂತೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.