“ಚಡ್ಡಿದೋಸ್ತ್”ರಿಂದ ಮಾನವೀಯ ಕಾರ್ಯ: ಊರು ಮೆಚ್ಚುವ ಕಾರ್ಯಕ್ಕೀಳಿದ ಗೆಳೆಯರು…!
1 min readಸವದತ್ತಿ: ಕೊರೋನಾ ಸಮಸ್ಯೆಯಲ್ಲಿ ಸಿಲುಕಿದ ತಮ್ಮೂರಿನ ಜನರ ಸಹಾಯಕ್ಕೆ ಅದೇ ಗ್ರಾಮದ ಚಡ್ಡಿದೋಸ್ತ್ ರು ಮುಂದಾಗಿ ಮಾನವೀಯತೆ ಮೆರೆದಿರುವ ಪ್ರಸಂಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಚಡ್ಡಿದೋಸ್ತ್ ರಿಗೆ ಪಾಠ ಮಾಡಿದ ನಿವೃತ್ತ ಶಿಕ್ಷಕರುಗಳಾದ ಬಿ.ಎಂ.ಬಾಣಿ, ಎಸ್.ಎಸ್.ಅಳಗೋಡಿ, ಎಸ್.ಪಿ.ಕಂಪ್ಲಿ, ಬಿ.ಎಸ್.ಪೂಜಾರ ಭಾಗವಹಿಸಿ, ಕಡು ಬಡವರಿಗೆ ದಿನಸಿ ಕಿಟ್ ಗಳನ್ನ ವಿತರಣೆ ಮಾಡಲಾಯಿತು.
ಕೋವಿಡ್-19 ನಿಯಮಾವಳಿಗಳ ಪ್ರಕಾರ ಸಭೆಯನ್ನ ಮಾಡಿದ್ದು ವಿಶೇಷವಾಗಿತ್ತು. ಸಾಂಕೇತಿಕವಾಗಿ ಸಭೆಯಲ್ಲಿ ಕೆಲವರಿಗೆ ವಿತರಣೆ ಮಾಡಿದ ನಂತರ ಸುಮಾರು 70 ಕುಟುಂಬಗಳ ಮನೆ ಮನೆಗೆ ತೆರಳಿ, ದಿನಸಿ ಕಿಟ್ ನೀಡಲಾಯಿತು.
ಎಂ.ಎಸ್.ದೇವಲಾಪೂರ, ಪ್ರವೀಣ ಗಾಣಗೇರ, ರವಿ ಬಾಗೋಡಿ, ಕಿರಣ ಗಾಣಗೇರ, ಉಮೇಶ ಹಿರೇಮಠ, ಅಜ್ಜಪ್ಪಾ ತೊರಗಲ್, ಸಂತೋಷ ಅಳಗೋಡಿ, ಲಕ್ಷ್ಮಣ ಮಲ್ಲೂರ, ಮಂಜುನಾಥ ಹೊನ್ನಬಿಂದಗಿ, ಪ್ರವೀಣ ಸೋದರ, ರಾಜು ಮೂಗಬಸವ, ಪ್ರದೀಪ ಕುಲಕರ್ಣಿ, ವೀರಣ್ಣ ಹಿತ್ತಲಮನಿ, ವಿಜಯ ಪೂಜಾರ, ವೀರಣ್ಣಾ ಮಡಿವಾಳರ, ಗುರುನಾಥ ತಡಕೋಡ, ಮಂಜುನಾಥ ಜೈನರ್, ಗೋರೆಸಾಬ ತಲ್ಲೂರ, ಮುದಕಪ್ಪಾ ಹುಡೇದ ಭಾಗವಹಿಸಿದ್ದರು.
ರಾಜು ಏಳಝರಿ, ರಾಯಸಾಬ ಶಿಲೇದಾರ, ಮಲ್ಲಿಕಾರ್ಜುನ ಮನ್ನೂರ, ಮಹಾಂತೇಶ ಜೋಡಗೇರ, ಗಂಗಾಧರ ಕಿಡೆನ್ನವರ, ಮಹಾಂತೇಶ ಪ್ಯಾಟಿ, ಸಂಗಪ್ಪಾ ಕತ್ತಿ, ನವೀನ ಪುಟಾನಿಕರ, ಮಲ್ಲಿಕಾರ್ಜುನ ತೋಟಗೇರ, ರಮೇಶ ಅಬ್ಬಾಯಿ, ಗುರುನಾಥ ಬಾಣಿ, ಸಿದ್ದಪ್ಪ ಚಿಕ್ಕಣ್ಣನವರ, ಮಾಂತೇಶ ಬಾಣಿ ಕೂಡಿಕೊಂಡು 50 ಸಾವಿರ ಹಣವನ್ನ ಮೂವತ್ತು ಗೆಳೆಯರು ಕೂಡಿಕೊಂಡು ಸಂಗ್ರಹಿಸಿ, ಬಡವರಿಗೆ ಕಿಟ್ ವಿತರಿಸಿ ಮಾದರಿಯಾಗಿದ್ದಾರೆ.