ಸಿಇಟಿ ಪರೀಕ್ಷೆ: ದಿನಾಂಕ ನಿಗದಿ
1 min readಬೆಂಗಳೂರು: 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವಂತ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಜುಲೈ 7 ಮತ್ತು 8ರಂದು ನಡೆಯಲಿದೆ. ಇಂತಹ ಪರೀಕ್ಷೆಗೆ ಎಲ್ಲಾ ಪರೀಕ್ಷೆಯನ್ನು ಗಮನದಲ್ಲಿ ಇಟ್ಟುಕೊಂಡು ವೇಳಾಪಟ್ಟಿಯನ್ನು ಪ್ರಕಟಿಸಲಾಗಿರುವುದಾಗಿ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದರು.
ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ಕುರಿತು ಮಾಹಿತಿ ನೀಡಿ, ಜುಲೈ 7 ಮತ್ತು 8ರಂದು ಸಿಟಿಇ ಪರೀಕ್ಷೆ ನಡೆಯಲಿದೆ. ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಕನ್ನಡ ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ 14ರಿಂದ ಜೂನ್ 15ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮೇ 24ರಿಂದ ಜೂನ್ 10ರವರೆಗೆ ನಡೆಯಲಿದೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಮೇ.4ರಿಂದ ಜೂನ್ 2ರವರೆಗೆ ನಡೆಯಲಿದೆ. ಈ ಎಲ್ಲಾ ವೇಳಾಪಟ್ಟಿಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದ ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿದರು.
ಸಿಇಟಿ ವೇಳಾಪಟ್ಟಿ
ದಿನಾಂಕ 7-7-2021 ಬುಧವಾರ ಬೆಳಗ್ಗೆ 10.30ರಿಂದ 11.50: ಜೀವವಿಜ್ಞಾನ(Biology)
ದಿನಾಂಕ 7-7-2021 ಬುಧವಾರ ಮಧ್ಯಾಹ್ನ 2.30ರಿಂದ 3.50: ಗಣಿತ(Mathematics)
ದಿನಾಂಕ 8-7-2021 ಗುರುವಾರ ಬೆಳಗ್ಗೆ 10.30ರಿಂದ 11.50: ಭೌತ ವಿಜ್ಞಾನ(physics)
ದಿನಾಂಕ 8-7-2021 ಗುರುವಾರ ಮಧ್ಯಾಹ್ನ 2.30ರಿಂದ 3.50: ರಸಾಯನವಿಜ್ಞಾನ(Chemistry)
ದಿನಾಂಕ 9-7-2021 ಶುಕ್ರವಾರ ಬೆಳಗ್ಗೆ 11.30ರಿಂದ 12.30: ಕನ್ನಡ(Kannada) (ಬೆಂಗಳೂರಿನಲ್ಲಿ ಮಾತ್ರ)