Posts Slider

Karnataka Voice

Latest Kannada News

ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ ನಿಧನ: ಹಿರಿಯ ಮುತ್ಸದಿ ಇನ್ನಿಲ್ಲ

Spread the love

ನವದೆಹಲಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಾಮವಿಲಾಸ ಪಾಸ್ವಾನ ನಿಧನರಾಗಿದ್ದಾರೆ.

ಈ ಬಗ್ಗೆ ಅವರ ಪುತ್ರ ಚಿರಾಗ್ ಟ್ವೀಟರನಲ್ಲಿ ಬರೆದುಕೊಂಡಿದ್ದು, ಹಿರಿಯ ಮುತ್ಸದಿಯೊಬ್ಬರು ಇನ್ನಿಲ್ಲವಾಗಿದ್ದಾರೆ. ಜುಲೈ 5 1946ರಲ್ಲಿ ಜನಿಸಿದ್ದ ಪಾಸ್ವಾನ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಲೋಕಜನಶಕ್ತಿಯಿಂದಲೇ ರಾಜಕೀಯ ಆರಂಭಿಸಿದ್ದ ಪಾಸ್ವಾನ, ಹಲವು ಪ್ರಮುಖ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಮವಿಲಾಸ್ ಪಾಸ್ವಾನ್ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಂತಾಪ

ಬೆಂಗಳೂರು: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ  ರಾಮವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ  ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಮವಿಲಾಸ ಪಾಸ್ವಾನ್ ಅವರು 8 ಬಾರಿ ಸಂಸದರಾಗಿ, ಹಲವು ಬಾರಿ ಕೇಂದ್ರ ಸಚಿವರಾಗಿ ಗುರುತರವಾಗಿ ಕಾರ್ಯನಿರ್ವಹಿಸಿದ್ದಾರೆ.  ಅವರು  ಸರಳ, ಸಜ್ಜನಿಕೆಯ ರಾಜಕೀಯ ಮತ್ಸದ್ದಿಯಾಗಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.   ಪರಿಶಿಷ್ಟ  ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ  ಅವರು ಅಪರವಾಗಿ ಶ್ರಮಿಸಿದ್ದಾರೆ. ಅವರ ನಿಧನದಿಂದ ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ ಯನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ ಪರಿವಾರಕ್ಕೆ ಹಾಗೂ ಅನುಯಾಯಿಗಳಿಗೆ ಭಗವಂತನು  ದುಃಖ ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ  ಚಿರಶಾಂತಿ‌ ನೀಡಲಿ ಎಂದು ಡಿಸಿಎಂ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *